ನವದೆಹಲಿ:
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2020ರ ಸೆಪ್ಟಂಬರ್ 1ರಂದು ಜಿಎಸ್ ಆರ್ 541(ಇ) ಕರಡು ಅಧಿಸೂಚನೆ ಮೂಲಕ, 2017ರ ಡಿಸೆಂಬರ್ 1ಕ್ಕೂ ಮುನ್ನ ಮಾರಾಟ ಮಾಡಿರುವ ಹಳೆಯ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸುವ ಬಗ್ಗೆ ಸಂಬಂಧಿಸಿದವರಿಂದ ಸಲಹೆ ಮತ್ತು ಸೂಚನೆಗಳನ್ನು ಆಹ್ವಾನಿಸಿದೆ. ತಿದ್ದುಪಡಿ ಮಾಡಲ್ಪಟ್ಟಿರುವ ಸಿಎಂವಿಆರ್ 1989ರ ಕಾಯ್ದೆಯ ಅಂಶಗಳು 2021ರ ಜನವರಿ 1ರಿಂದ ಜಾರಿಗೊಳಿಸಲು ಉದ್ದೇಶಿಸಲಾಗಿದೆ.
ಅಲ್ಲದೆ, ತಿದ್ದುಪಡಿ ಮಾಡಲ್ಪಟ್ಟಿರುವ ನಮೂನೆ ಸಂಖ್ಯೆ 51(ವಿಮಾ ಪ್ರಮಾಣಪತ್ರ)ದಲ್ಲಿ ಮೂರನೇ ವ್ಯಕ್ತಿಗೆ ವಿಮೆ ಮಾಡಿಸಲು ಫಾಸ್ಟ್ ಟ್ಯಾಗ್ ಹೊಂದುವುದು ಕಡ್ಡಾಯಗೊಳಿಸಲು ಉದ್ದೇಶಿಸಲಾಗಿದೆ. ಆ ವೇಳೆ ಫಾಸ್ಟ್ ಟ್ಯಾಗ್ ಐಡಿಯನ್ನು ಗುರುತಿಸಲಾಗುವುದು. ಇದನ್ನು 2021ರ ಏಪ್ರಿಲ್ 1ರಿಂದ ಜಾರಿಗೊಳಿಸಲು ಉದ್ದೇಶಿಸಲಾಗಿದೆ.
