ಪಾಕ್ ಗೆ ಖಡಕ್ ವಾರ್ನಿಂಗ್ ನೀಡಿದ ಎಫ್ಎಟಿಎಫ್ ..!!!

ಹೊಸದಿಲ್ಲಿ:

     ಜಾಗತಿಕವಾಗಿ ಉಗ್ರರ ವಿರುದ್ಧ ಕಠಿನ ಕ್ರಮಕ್ಕೆ ಪಾಕಿಸ್ಥಾನದ ಮೇಲೆ ಹಲವು ದೇಶಗಳು ಒತ್ತಡ ಹೇರಿರುವ ಬೆನ್ನಲ್ಲೇ ವಿಶ್ವದ ಾರ್ಥಿಕ ಸಮತೋಲನ ಕಾಪಾಡುವ ಜಾಗತಿಕ ಹಣಕಾಸು ವಿಚಕ್ಷಣಾ ದಳವು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದೆ.

    ಎಫ್ಎಟಿಎಫ್ ನಿದೇರ್ಶನವನ್ನು ಕಾರ್ಯರೂಪಕ್ಕೆ ತರಲು ಪಾಕಿಸ್ತಾನಕ್ಕೆ ಕಾಲಮಿತಿ ನೀಡಿರುವ ಎಫ್ಎಟಿಎಫ್ ಅದರೊಳಗಾಗಿ ಕ್ರಮಕ್ಕೆ ಆಗ್ರಹಿಸಿದೆ. ಅದಷ್ಟೆ ಅಲ್ಲದೆ, ಉಗ್ರವಾದ ಪಾಕ್ ಸರ್ಕಾರ ಮಾಡುತ್ತಿರುವ ಹಣಕಾಸು ಸಹಾಯವನ್ನು ನಿಲ್ಲಿಸಲು ಸಹ ತಿಳಿಸಿದೆ ಮತ್ತು ಈ ವಿಷಯದಲ್ಲಿ ಪಾಕಿಸ್ತಾನ ವಿಶ್ವಾಸಾರ್ಹ ಪ್ರಗತಿಯನ್ನು ತೋರಿಸಬೇಕು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ. ಅಷ್ಟೇ ಅಲ್ಲ, ಎಫ್ಎಟಿಎಫ್ ಕ್ರಮವನ್ನು ಭಾರತ ಸ್ವಾಗತಿಸಿದೆ.

   ಸಭೆ ಸೇರಿದ್ದ ಎಫ್ಎಟಿಎಫ್, ಲಷ್ಕರ್‌ ಎ ತೋಯ್ಬಾ, ಜೈಶ್‌ ಎ ಮೊಹಮ್ಮದ್‌ ಮತ್ತು ಇತರ ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ತಡೆಯುವಲ್ಲಿ ಪಾಕಿಸ್ಥಾನ ವಿಫ‌ಲವಾಗಿದೆ ಎಂದು ಎಚ್ಚರಿಕೆ ನೀಡಿತ್ತು. ಅಕ್ಟೋಬರ್‌ ಒಳಗೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ತಪ್ಪಿದ್ದಲ್ಲಿ ಕಠಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಸೂಚನೆ ನೀಡಿದೆ. ಒಂದು ವೇಳೆ ಪಾಕಿಸ್ಥಾನವು ಯಾವುದೇ ಕ್ರಮ ತೆಗೆದುಕೊಳ್ಳದಿದ್ದಲ್ಲಿ, ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಮತ್ತೂಂದು ಸುತ್ತಿನ ಸಭೆಯಲ್ಲಿ ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ. ಎಫ್ಎಟಿಎಫ್ ಈಗಾಗಲೇ ಪಾಕಿಸ್ಥಾನಕ್ಕೆ 27 ಅಂಶಗಳ ಕಾರ್ಯಯೋಜನೆಯನ್ನು ನೀಡಿದೆ.

    2018 ಅಕ್ಟೋಬರ್‌ನಲ್ಲಿ ನಡೆದ ಸಭೆಯಲ್ಲಿ ಭಾರತವು ಎಫ್ಎಟಿಎಫ್ಗೆ ಪಾಕಿಸ್ಥಾನದಲ್ಲಿನ ಉಗ್ರ ಸಂಘಟನೆಗಳ ಬಗ್ಗೆ ಹೆಚ್ಚುವರಿ ಮಾಹಿತಿ ನೀಡಿತ್ತು. ಇದರಿಂದಾಗಿ ಪಾಕಿಸ್ಥಾನದ ಮೇಲೆ ಒತ್ತಡ ಹೆಚ್ಚಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಲಷ್ಕರ್‌, ಜೈಶ್‌ ಹಾಗೂ ಜಮಾತ್‌ ಉದ್‌ ದಾವಾ ಮತ್ತು ಇತರ ಉಗ್ರ ಸಂಘಟನೆಗಳ ಮುಖಂಡರನ್ನು ಪಾಕಿಸ್ಥಾನ ಬಂಧಿಸಿತಾದರೂ, ಇವರ ವಿರುದ್ಧ ಭಯೋತ್ಪಾದನೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಲ್ಲ. ಬದಲಿಗೆ ಕಾನೂನು ಸುವ್ಯವಸ್ಥೆ ಪಾಲನೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap