3 ವರ್ಷದ ಪುಟ್ಟ ಮಗುವಿಗೆ ಮದ್ಯ ಕುಡಿಸಿದ ತಂದೆ …!!

ನವದೆಹಲಿ:

        3 ವರ್ಷದ ಪುಟ್ಟ ಮಗುವಿಗೆ ತಂದೆಯೇ ಮಗುವಿನ ಹಾಲಿನ ಬಾಟಲಿಯಲ್ಲಿ ಮದ್ಯ ಬೆರೆಸಿ ಒತ್ತಾಯ ಮಾಡಿ ಕುಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

       ದೆಹಲಿಯ ಪ್ರೇಮ್ ನಗರ ಪ್ರದೇಶದಲ್ಲಿ ನಡೆದಿದ್ದು, ಪುಟ್ಟ ಕಂದಮ್ಮಳನ್ನು ದೆಹಲಿಯ ಮಹಿಳಾ ಆಯೋಗದ ತಂಡ ರಕ್ಷಣೆ ಮಾಡಿದೆ. ಮಲ-ಮೂತ್ರದಲ್ಲಿ ಮಲಗಿ ಹೊರಳಾಡುತ್ತಿದ್ದ 3 ವರ್ಷದ ಪುಟ್ಟ ಕಂದಮ್ಮ ತೀವ್ರವಾಗಿ ಅನಾರೋಗ್ಯದಿಂದ ಈಕೆಯ ಪಕ್ಕದಲ್ಲೇ ಮದ್ಯದ ನಶೆಯಲ್ಲಿ ತಂದೆಯೂ ಮಲಗಿದ್ದರುವುದು ಮಹಿಳಾ ಆಯೋಗದ ತಂಡ ಭೇಟಿ ನೀಡಿದಾಗ ಕಂಡುಬಂದಿದೆ.

       ಕಳೆದ ಮೂರು ದಿನಗಳಿಂದ ಪ್ರೇಮ ನಗರ ಪ್ರದೇಶದಲ್ಲಿ ಮಗು ಮಲ-ಮೂತ್ರ ಮಾಡಿಕೊಂಡು ಅದರ ಮೇಲೆಯೇ ಮಲಗುತ್ತಿದ್ದು. ಅಲ್ಲದೆ ತಂದೆ ಮಗುವಿಗೆ ಊಟವನ್ನು ಸಹ ನೀಡುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಇದನ್ನು ಗಮನಿಸಿದ ಸ್ಥಳೀಯರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದೆ ಆಯೋಗದವರು ರೂಮಿನಲ್ಲಿ ಮದ್ಯದ ಖಾಲಿ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಗಾಬರಿಗೊಂಡಿದ್ದಾರೆ. ಇದರ ಮಧ್ಯೆಯೇ ತಂದೆ ವಿಪರೀತ ಕುಡಿದು ಬಾಹ್ಯ ಜಗತ್ತಿನ ಪರಿವೇ ಇಲ್ಲದಂತೆ ಮಲಗಿದ್ದನು. ಹೀಗಾಗಿ ಆತನನ್ನು ಎಬ್ಬಿಸಲು ಆಯೋಗದ ಸಿಬ್ಬಂದಿ ಪ್ರಯತ್ನಿಸಿದರು. ಆದ್ರೆ ಆತ ಸಿಬ್ಬಂದಿ ಮೇಲೆ ಎಗರಾಡಿದ್ದಾನೆ ಎಂದು ಆಯೋಗದ ಅಧಕಾರಿಗಳು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap