ಪಂಚಕುಲ
ದೇಶದಲ್ಲಿ ಪತಂಜಲಿ ಎಂಬ ಹೆಸರಿನಿಂದ ಪ್ರಖ್ಯಾತಿ ಪಡೆದ ಯೋಗ ಗುರು ಬಾಬಾ ರಾಮದೇವ್ ಮತ್ತು ಅವರ ಕಂಪನಿ ವಿರುದ್ಧ ಅನುಮೋದನೆ ಪಡೆಯದೆ ತನ್ನ ಔಷಧಿ ಕಿಟ್ ‘ಕೊರೊನಿಲ್ ಮತ್ತು ಸ್ವಸಾರಿ’ ಜಾಹೀರಾತು ನೀಡಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿ ಹೈಕೋರ್ಟ್ ವಕೀಲ ಸುಖ್ವಿಂದರ್ ಸಿಂಗ್ ನಾರಾ ಹರಿಯಾಣ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ಹೊರತಾಗಿಯೂ ಕಂಪನಿಯು ತಾನು ತಯಾರಿಸಿದೆ ಎಂದು ಹೇಳಿಕೊಂಡಿರುವ ‘ಕೊರೊನಿಲ್ ಮತ್ತು ಸ್ವಸಾರಿ’ ಔಷಧಿ ಜಾಹೀರಾತು ಮಾಡಿದೆ ೀ ಔಷಧಿಗೆ ಸರಿಯಾದ ಅನುಮೋದನೆ ಇಲ್ಲದೆ ಇಂತಹ ಜಾಹೀರಾತುಗಳನ್ನು ಮಾಡುವಂತಿಲ್ಲ.
ಅವರು ವಿಪತ್ತು ನಿರ್ವಹಣಾ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದ್ದಾರೆ.ಅವರ ವಿರುದ್ಧ ಸಂಬಂಧಿತ ಕಾನೂನುಗಳ ಅಡಿ ಪ್ರಕರಣ ದಾಖಲಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಔಷಧಿ ಬಗ್ಗೆ ಸರಿಯಾದ ಸಂಶೋಧನೆ ಮತ್ತು ಕ್ಲಿನಿಕಲ್ ಪ್ರಯೋಗ ನಡೆದಿದೆಯೇ?. ನಡೆದಿದ್ದರೆ ಅದನ್ನು ಪ್ರಕಟಿಸಲಾಗಿದೆಯೇ?. ಔಷಧಿಗೆ ಐಸಿಎಂಆರ್ ಮತ್ತು ಆಯುಷ್ ಸಚಿವಾಲಯವು ಅನುಮೋದನೆ ನೀಡಿದೆಯೇ? ಇದ್ಯಾವುದು ಸ್ಪಷ್ಟೀಕರಣ ನೀಡದೆಯೇ ಜಾಹೀರಾತು ಮಾಡಿ ಔಷಧಿಯನ್ನು ಮಾರುಕಟ್ಟೆಗೆ ತಂದಿರುವುದು ತಪ್ಪು ಎಂದು ದೂರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
