ಸೀತಾರಾಮ್ ಯಚೂರಿ ವಿರುದ್ಧ ಎಫ್ಐಆರ್..!!

ನವದೆಹಲಿ

        ಇಡೀ ದೇಶದಲ್ಲಿ ಕಾರ್ಮಿಕರ ಧ್ವನಿ ಎಂದೇ ಖ್ಯಾತರಾದ ಸಿತಾರಾಮ್ ಯಚೂರಿ ಅವರು ಕೆಲ ದಿನಗಳ ಹಿಂದೆಯಷ್ಟೆ ನೀಡಿದ್ದ ಒಂದು ಹೇಳಿಕೆ ಇಡೀ ದೇಶದಲ್ಲಿ ಸಂಚಲನ ಮೂಡಿಸಿದೆ ಮತ್ತು ಇದರಿಂದಾಗಿ ಅವರ ವಿರುದ್ಧ ಹರಿದ್ವಾರದಪೊಲೀಸ  ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

       ಹಿಂದೂಗಳು ಕೂಡ ಹಿಂಸಾಚಾರಿಗಳಾಗಬಲ್ಲರು’ ಎಂಬ ಹೇಳಿಕೆ ನೀಡಿದ್ದ ಸೀತಾರಾಮ್ ಯೆಚೂರಿ ಅವರ ವಿರುದ್ಧ ಹರಿದ್ವಾರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಸೀತಾರಾಮ್ ಯೆಚೂರಿ ವಿರುದ್ಧ ಬಾಬಾ ರಾಮದೇವ್ ಅವರು ಹರಿದ್ವಾರದ ಪೊಲೀಸರಿಗೆ ದೂರು ನೀಡಿದ್ದರು.

         ಹಿಂದೂಗಳ ಪವಿತ್ರ ಕಾವ್ಯಗಳಾದ ರಾಮಾಯಾಣ ಹಾಗೂ ಮಹಾಭಾರತದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ದೂರಿದ್ದಾರೆ.  ಚುನಾವಣೆಯ ಆರಂಭಿಕ ಹಂತಗಳು ಮುಕ್ತಾಯಗೊಂಡ ಬಳಿಕ ಅವರು ಕಟು ಹಿಂದುತ್ವ ಅಜೆಂಡಾಕ್ಕೆ ಮರಳಿದ್ದಾರೆ. 35 ಎ ಮತ್ತು 370ನೇ ವಿಧಿಗಳ ರದ್ದತಿ ಬಗ್ಗೆ ಮಾತನಾಡುತ್ತಿದ್ದಾರೆ.

           ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ, ಏಕಪ್ರಕಾರದ ನಾಗರಿಕ ನೀತಿ ಸಂಹಿತೆ ಮತ್ತು ಎನ್‌ಆರ್‌ಸಿ ಕುರಿತು ಹೇಳುತ್ತಿದ್ದಾರೆ. ಇಂಥ ವಿಚಾರಗಳ ಹಿನ್ನೆಲೆಯಲ್ಲಿಯೇ ಜನರ ಭಾವನೆಗಳನ್ನು ಉದ್ರೇಕಿಸುವ ಸಲುವಾಗಿ ಮೂರನೇ ಹಂತದ ಚುನಾವಣೆ ಮುಗಿದ ಬಳಿಕ ಭೋಪಾಲ್‌ನಲ್ಲಿ ಸಾಧ್ವಿ ಪ್ರಗ್ಯಾ ಸಿಂಗ್ ಅವರನ್ನು ಸ್ಪರ್ಧೆಗೆ ಇಳಿಸುವ ನಿರ್ಧಾರವನ್ನು ತೆಗೆದುಕೊಳ್ಳ ಲಾಗಿದೆ ಎಂದು ಯೆಚೂರಿ ಹೇಳಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ