ಬಿಹಾರ :
ಬಿಜೆಪಿಯಿಂದ ಹೊರಬಿದ್ದು ನಂತರ ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಜನತಾದಳ (ಸಂಯುಕ್ತ) ಪಕ್ಷ ಸೇರಿದ್ದ ಪ್ರಶಾಂತ್ ಕಿಶೋರ್ . ಮುಖ್ಯಮಂತ್ರಿ ನಿತೀಶ್ ಅವರನ್ನು ನೇರವಾಗಿಯೇ ಟೀಕಿಸಲು ಆರಂಭಿಸಿದ್ದರಿಂಧ ಅವರನ್ನು ಆ ಪಕ್ಷದಿಂದಲೂ ವಜಾಗೊಳಿಸಲಾಗಿತು.ಈಗ ಅವರ ವಿರುದ್ಧ ಎಫ್ ಐ ಆರ್ ದಾಖಲಾಗದೆ.
ಬಳಿಕ ‘ಬಾತ್ ಬಿಹಾರ್ ಕಿ’ ಎಂಬ ಕಾರ್ಯಕ್ರಮದ ಮೂಲಕ 10 -15 ವರ್ಷಗಳಲ್ಲಿ ಬಿಹಾರವನ್ನು ಅತ್ಯಂತ ಮುಂದುವರಿದ ರಾಜ್ಯಗಳ ಸ್ಥಾನಕ್ಕೆ ತರುವುದೇ ನನ್ನ ಗುರಿ ಇದಕ್ಕಾಗಿ ಯುವಕರು, ವಿದ್ಯಾವಂತ ಯುವಕರು ಕೈಜೋಡಿಸಬೇಕೆಂದು ಪ್ರಚಾರ ನಡೆಸಿದ್ದರು.
ಶಾಶ್ವತ್ ಗೌತಮ್ ಎಂಬುವರು ತಮ್ಮ ದೂರಿನಲ್ಲಿ, ಒಸಾಮ ಎಂಬಾತ ನನ್ನ ಸ್ನೇಹಿತನಾಗಿದ್ದ, ಆತ ಕೆಲ ವರ್ಷಗಳ ಹಿಂದೆ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ. ಆತನಿಗೆ ನಾನೇ ಈ ಕಾರ್ಯಕ್ರಮದ ರೂಪುರೇಷೆಗಳನ್ನು ನೀಡಿದ್ದೆ.ಈಗ ಒಸಾಮಾ ಪ್ರಶಾಂತ್ ಕಿಶೋರ್‌ಗೆ ಈ ಕಾರ್ಯಕ್ರಮದ ಮೂಲವನ್ನು ನಕಲು ಮಾಡಿ ಕೊಟ್ಟಿದ್ದಾನೆ. ಆತನ ವಿರುದ್ಧವೂ ಎಫ್ ಐಆರ್ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
