ಯುವಕನ ಜೀವ ತೆಗೆದ ಮೊಟ್ಟೆ ಚಾಲೆಂಜ್..!

ಲಕ್ನೋ:

     ದೇಶದಲ್ಲಿ ಇತ್ತೀಚೆಗೆ ಫ್ಯಾಷನ್ ಆಗಿರುವ ಫುಡ್ ಚಾಲೆಂಜ್ ಗಳಿಂದ ಎಷ್ಟು ಮನರಂಜನೆ ಸಿಗುತ್ತದೆಯೋ ಅಷ್ಟೆ ಅಪಾಯಕಾರಿ ಯೂ ಹೌದು ನಗರದ ಯುವಕನೊಬ್ಬ ಕೇವಲ ಎರಡು ಸಾವಿರದ ಆಸೆ 50 ಕೋಳಿ ಮೊಟ್ಟೆಗಳನ್ನು ತಿನ್ನುವುದಾಗಿ ಬಾಜಿ ಕಟ್ಟಿ, ಕೊನೆಗೆ ಪ್ರಾಣವನ್ನೇ ಕಳೆದುಕೊಂಡ ವಿಲಕ್ಷಣ ಘಟನೆ  ಉತ್ತರಪ್ರದೇಶದ ಜೌನ್​ಪುರ್ ಜಿಲ್ಲೆಯಲ್ಲಿ ವರದಿಯಾಗಿದೆ .

    ಸುಭಾಷ್ ಯಾದವ್ ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಯಾದವ್ ಅವರು ತಮ್ಮ ಸ್ನೇಹಿತನೊಂದಿಗೆ ಮೊಟ್ಟೆ ತಿನ್ನುವಾಗ ಇಬ್ಬರ ನಡುವೆ ಸವಾಲಿನ ಮಾತುಕತೆ ನಡೆದಿದೆ. ಅದು ಏನೆಂದರೆ 50 ಮೊಟ್ಟೆಗಳನ್ನು ತಿಂದರೆ ಗೆದ್ದರೆ 2 ಸಾವಿರ ಬಹುಮಾನ ಎಂಬ ಮಾತಾಗಿತ್ತು. 

   ಇನ್ನೂ ಸವಾಲು ಸ್ವೀಕರಿಸಿದ ಸುಭಾಷ್  42 ಮೊಟ್ಟೆಗಳನ್ನು ತಿಂದು ಸ್ಥಳದಲ್ಲೇ ಕುಸಿದಿದ್ದಾರೆ ತಕ್ಷಣ ಸ್ಥಳಿಯರು ಅವರನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದಾದ ಕೆಲವು ಗಂಟೆಗಳ ಬಳಿಕ ಚಿಕಿತ್ಸೆ ಫಲಿಸದೆ ಸುಭಾಷ್ ಯಾದವ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

   ಮೊದಲು ಸುಭಾಷ್‌ನನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದಾಗ ವೈದ್ಯರು ಆತನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದಾರೆ ಆಸ್ಪತ್ರೆಗೆ ದಾಖಲಾದ ಒಂದು ಗಂಟೆಯಲ್ಲಿ ಸುಭಾಷ್ ಮೃತಪಟ್ಟಿದ್ದಾರೆ.ಇನ್ನು ಅತಿಯಾಗಿ ಮೊಟ್ಟೆ ಸೇವಿಸಿದ ಕಾರಣ ಮೃತಪಟ್ಟಿದ್ದಾರೆ ಎಂದು ವೈದ್ಯರು ಧೃಡಪಡಿಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap