ಕಾಶ್ಮೀರ : ನಾಯಕರನ್ನು ಬಂಧನದಿಂದ ಮುಕ್ತಗೊಳಿಸಿ : ಅಲೈಸ್ ವೆಲ್ಸ್

ವಾಷಿಂಗ್ಟನ್ ಡಿಸಿ:

       ಇತ್ತೀಚಿಗೆ ಭಾರತಕ್ಕೆ ಭೇಟಿ ನೀಡಿದ್ದ ವಿದೇಶಿ ನಿಯೋಗದಲ್ಲಿನ ಹಿರಿಯ ಅಮೆರಿಕಾದ ರಾಜತಾಂತ್ರಿಕ ಅಧಿಕಾರಿ ಅಲೈಸ್ ವೆಲ್ಸ್,370ನೇ ವಿಧಿ ಜಾರಿ ಸಂಬಂಧ ಕಾಶ್ಮೀರಿ ನಾಯಕರನ್ನು ಬಂಧನದಲ್ಲಿ ಇಟ್ಟಿರುವ ಭಾರತ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರಲ್ಲದೇ,ಕೆಲದಿನಗಳಿಂದ ಕಾಶ್ಮೀರದಲ್ಲಿ ಇಂಟರ್ ನೆಟ್ ಸೇವೆ ಸೇರಿದಂತೆ ಮತ್ತಿತರ ಸೇವೆಗಳು ಪುನರ್ ಆರಂಭಗೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

      ಮೂರು ರಾಷ್ಟ್ರಗಳ ಪ್ರವಾಸ ಮುಗಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಪ್ರಧಾನ ಉಪ ಸಹಾಯಕ ಕಾರ್ಯದರ್ಶಿ ವೆಲ್ಸ್,  ಅಮೆರಿಕಾ ರಾಯಬಾರಿಗಳು ಹಾಗೂ ಇತರ ವಿದೇಶಿ ನಿಯೋಗದೊಂದಿಗೆ ಜಮ್ಮು- ಕಾಶ್ಮೀರಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಇಂಟರ್ ನೆಟ್ ಸೇವೆ ಸೇರಿದಂತೆ ಮತ್ತಿತರ ಉತ್ತಮ ಹೆಜ್ಜೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಅಮೆರಿಕಾ, ವಿಯೆಟ್ನಾಂ, ಬಾಂಗ್ಲಾದೇಶ, ಮಾಲ್ಡೀವ್ಸ್, ಮೊರಾಕ್ಕೊ, ಫಿಜಿ, ನಾರ್ವೆ, ಫಿಲಿಫಿನ್ಸ್,  ಅರ್ಜೆಂಟೈನಾ ಸೇರಿದಂತೆ 15 ರಾಷ್ಟ್ರಗಳ ರಾಯಬಾರಿಗಳು ಈ  ತಿಂಗಳ ಆರಂಭದಲ್ಲಿ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದರು.ವಿದೇಶಿ ರಾಯಬಾರಿಗಳ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿದದ್ದು ಫಲಪ್ರದವಾಗಿದೆ. ಬಂಧನಕ್ಕೊಳಗಾಗಿರುವ ಜಮ್ಮು-ಕಾಶ್ಮೀರದ ನಾಯಕರನ್ನು ಯಾವುದೇ ಪ್ರಕರಣವಿಲ್ಲದೆ ಕ್ಷಿಪ್ರವಾಗಿ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap