ನವದೆಹಲಿ
ಸಂಸತ್ತಿನ ಬಜೆಟ್ ಅಧಿವೇಶನ ಆರಂಭಗೊಳ್ಳಲು ದಿನವಷ್ಟೇ ಬಾಕಿ ಉಳಿದಿರುವಾಗ, ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯ ಹಕ್ಕು ಹೊಂದಿದೆ ಎಂದು ಬಿಜೆಪಿಯ ಒಂದು ಈಗಲೂ ಪ್ರತಿಪಾದಿಸುತ್ತಿದೆ . ಆದರೆ ಈ ವಾದವನ್ನು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ತೀವ್ರವಾಗಿ ವಿರೋಧಿಸಿವೆ.ಸರ್ಕಾರ ಪೂರ್ಣಪ್ರಮಾಣದ ಬಜೆಟ್ ಮಂಡಿಸುವುದು ಅಸಾಂವಿಧಾನಕ ಕ್ರಮವೇನಲ್ಲ ಎಂದು ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಯುಎನ್ಐ ಗೆ ತಿಳಿಸಿದ್ದಾರೆ.
ಕೆಲವರು ನನ್ನ ಸಲಹೆ ಹಾಗೂ ಕಾನೂನು ಅಭಿಪ್ರಾಯ ಪಡೆದುಕೊಂಡಿದ್ದು, ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವುದರಲ್ಲಿ ಸಂವಿಧಾನದ ವಿರುಧ್ದವಾಗುವುದಿಲ್ಲ ಎಂದು ಅವರಿಗೆ ಸಲಹೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಈ ಮೂಲಕ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಬಿಜೆಪಿ ಒಂದು ವರ್ಗದ ವಿರೋಧವಿಲ್ಲ ಎಂದು ಎಂಬುದನ್ನು ಸುಬ್ರಮಣಿಯನ್ ಸ್ವಾಮಿ ಹೇಳಿಕೆ ಸಮರ್ಥಿಸುತ್ತದೆ.
ಆದರೆ ಸರ್ಕಾರದ ಇಂತಹ ಕ್ರಮವನ್ನು ಕಾಂಗ್ರೆಸ್ ಸೇರಿದಂತೆ ಇತರ ರಾಜಕೀಯ ಪಕ್ಷಗಳು ವಿರೋಧಿಸಿವೆ.
ಸಂಪ್ರದಾಯದಂತೆ ಚುನಾವಣಾ ವರ್ಷದಲ್ಲಿ, ಹೊರ ಹೋಗಲಿರುವ ಸರ್ಕಾರ ಮಧ್ಯಂತರ ಬಜೆಟ್ ಅಥವಾ ಲೇಖಾನುದಾನ ಪಡೆದುಕೊಳ್ಳವುದು ಅನೂಚಾನವಾಗಿ ನಡೆದು ಬಂದ ಪರಂಪರೆಯಾಗಿದೆ. ಆದಾಗ್ಯೂ, 2009ರಲ್ಲಿ ಯುಪಿಎ ಸರ್ಕಾರ ಸೇರಿದಂತೆ ಹಲವು ಸರ್ಕಾರಗಳು ನೀತಿ ನಿರ್ಧಾರಗಳನ್ನು ಪ್ರಕಟಿಸುವಲ್ಲಿ ಯಾವುದೇ ಹಿಂಜರಿಕೆ ತೋರಿರಲಿಲ್ಲ ಎಂಬುದನ್ನು ಗಮನಿಸಬಹುದು. ಪೂರ್ಣ ಪ್ರಮಾಣದ ಅಯವ್ಯಯ ಮಂಡನೆ ಸತ್ ಸಂಪ್ರದಾಯಗಳ ಉಲ್ಲಂಘನೆಯಾಗಲಿದ್ದು, ಇಂತಹ ಯಾವುದೇ ಪ್ರಯತ್ನವನ್ನು ಸದನದೊಳಗೆ ಪ್ರಶ್ನಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.
ಹೊರಹೋಗುತ್ತಿರುವ ಸರ್ಕಾರ ಮಧ್ಯಂತರ ಬಜೆಟ್ ಮಾತ್ರ ಮಂಡಿಸಬೇಕು ಎಂಬುದು ಸಂಪ್ರದಾಯವಷ್ಟೆ, ಲೋಕಸಭೆಯಲ್ಲಿ ಬಹುಮತ ಹೊಂದಿರುವ ಚುನಾಯಿತ ಸರ್ಕಾರ ಪೂರ್ಣ ಮಟ್ಟದ ಬಜೆಟ್ ಮಂಡಿಸಿದರೆ, ಸಂವಿಧಾನ ಬಾಹಿರವೇನಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹೊರಹೋಗುತ್ತಿರುವ ಸರ್ಕಾರ ಪೂರ್ಣ ಮಟ್ಟದ ಬಜೆಟ್ ಮಂಡಿಸುವುದು ಅಸಂವಿಧಾನಿಕ ಎಂದು ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಇತ್ತೀಚಿಗೆ ಹೇಳಿದ್ದರು
ಹಿರಿಯ ಕಾಂಗ್ರೆಸ್ ನಾಯಕ ಮನೀಷ್ ತಿವಾರಿ, ಒಂದೊಮ್ಮೆ ಬಿಜೆಪಿ ಪೂರ್ಣ ಪ್ರಮಾಣದ ಅಯವ್ಯಯ ಮಂಡಿಸಿದರೆ, ಅದನ್ನು ಸದನದೊಳಗೆ ಕಾಂಗ್ರಸ್ ಪಕ್ಷ ಪ್ರಶ್ನಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.ಮಾಧ್ಯಮಗಳ ವರದಿಗಳು ನಿಜವಾಗಿ, ಫೆಬ್ರವರಿ 1 ರಂದು ಎನ್ ಡಿಎ-ಬಿಜೆಪಿ ಸರ್ಕಾರ ಪೂರ್ಣ ಮಟ್ಟದ ಬಜೆಟ್ ಮಂಡಿಸಲು ಯೋಜಿಸಿದರೆ, ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ನಂತರ ಕಳೆದ ಎಳು ದಶಕಗಳಲ್ಲಿ ಅನುಸರಿಸಿಕೊಂಡು ಬಂದಿರುವ ಸಂಸದೀಯ ಸತ್ ಸಂಪ್ರದಾಯ, ನಿಯಮ ಹಾಗೂ ಪರಂಪರೆಯ ಉಲ್ಲಂಘನೆಯಾಗಲಿದೆ ಎಂದು ಅವರು ಹೇಳಿದ್ದಾರೆ.