ಹರಿದ್ವಾರ:
ಭಾರತದ ಜೀವನಾಡಿಗಳಲ್ಲಿ ಒಂದಾದ ಗಂಗಾ ನದಿಯ ಸಂರಕ್ಷಣೆಗೆ ಮತ್ತು ಸ್ವಚ್ಚತೆಗೆ ಆಗ್ರಹಿಸಿ 110 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಶ್ರೀ ಜಿ.ಡಿ.ಅಗರ್ವಾಲ್ (87) ಹೃಷಿಕೇಶದ ಏಮ್ಸ್ ಆಸ್ಪತ್ರೆಯಲ್ಲಿ ನಿನ್ನೆ ಮಧ್ಯಾಹ್ನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ .
ಅವರನ್ನು ಜನ ಶ್ರೀ ಸ್ವಾಮಿ ಜ್ಞಾನಸ್ವರೂಪ ಸಾನಂದ್ ಎಂದು ಕೂಡ ಕರೆಯುತ್ತಿದ್ದರು. ಕಾನ್ಪುರದ ಐಐಟಿಯಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ವೈಜ್ಞಾನಿಕ ಲೇಖನಗಳನ್ನು ಬರೆಯುತ್ತಿದ್ದರು ಎಂದು ತಿಳಿದು ಬಂದಿದೆ .ಅವರು 2011ರಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದರು ಮತ್ತು ಗಂಗಾ ನದಿಯ ಅಳಿವು ಉಳಿವಿನ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಜಲಸಂಪನ್ಮೂಲ ಸಚಿವರು, ರಾಜ್ಯ ಸರ್ಕಾರಕ್ಕೆ ಮನವಿ ನೀಡಿ ಸಾಕಾಗಿದೆ ಎಂದು ನೊಂದುಕೊಂಡಿದ್ದರು. ಹೀಗಾಗಿ ಜೂ.22ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.
ಈಗ ಎಚ್ಚೆತ್ತ ಸರ್ಕಾರಗಳು ಅವರ ನಿಧನದ ಬಳಿಕ ಅಗರ್ ವಾಲ್ ಅವರ ಬೇಡಿಕೆಗಳನ್ನು ಪೂರೈಸಲು ಮುಂದಾಗಿದೆ. ಈ ಬಗ್ಗೆ ಮಾತನಾಡಿರುವ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ, ಅಗರ್ವಾಲ್ ಉಪವಾಸದ ಸಮಯದಲ್ಲಿ ನಾವು ಅವರಿಗೆ ಪತ್ರ ಬರೆದಿದ್ದು, ಬೇಡಿಕೆಗಳನ್ನು ಒಪ್ಪಿಕೊಂಡಿದ್ದೇವೆ ಎಂದು ಹೇಳಿದ್ದೆವು ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ