ಕೇಂದ್ರ ಸಚಿವರ ವಾಗ್ದಾಳಿಗಳಿಗೆ ಸಜ್ಜಾಗಿ : ಗಿತಾ ಗೋಪಿನಾಥ್ ಗೆ ಪಿ ಚಿದಂಬರಂ ಸಲಹೆ

ನವದೆಹಲಿ:

  ಕೆಲ ದಿನಗಳ ಹಿಂದೆ ಐಎಂಎಫ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಶೇಕಡಾ 4.8 ಕ್ಕೆ ಇಳಿಸಿರುವ ಬಗ್ಗೆ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಪ್ರತಿಕ್ರಿಯೆ ನೀಡಿದ್ದಾರೆ. 

  ಅಂತರರಾಷ್ಟ್ರೀಯ ಹಣಕಾಸು ನಿಧಿ ಆರ್ಥಿಕ ಬೆಳವಣಿಗೆ ಅಂದಾಜನ್ನು ಇಳಿಕೆ ಮಾಡಿರುವ ಪರಿಣಾಮ ಜಾಗತಿಕ ಸಂಸ್ಥೆ ಹಾಗೂ ಗೀತಾ ಗೋಪಿನಾಥ್ ವಿರುದ್ಧ ಸರ್ಕಾರದ ಸಚಿವರು ಮಾಡಬಹುದಾದ ವಾಗ್ದಾಳಿಗಳು, ಆಕ್ಷೇಪಗಳು ದೂರವೇನಿಲ್ಲಾ ಎಂದು ಚಿದಂಬರಂ ಹೇಳಿದ್ದಾರೆ. 

 ಐಎಂಎಫ್ ಶೇ. 4.8 ರಷ್ಟು ಬೆಳವಣಿಗೆ ಇರಲಿದೆ ಎಂದು ಹೇಳಿದೆ. ಆದರೆ ಅದಕ್ಕಿಂತಲೂ ಕಡಿಮೆ ಬೆಳವಣಿಗೆ ದಾಖಲಾದರೂ ಅಚ್ಚರಿಯೇನಿಲ್ಲ ಎಂದು ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ನೋಟು ಅಮಾನ್ಯೀಕರಣ ಕ್ರಮವನ್ನು ಮೊದಲು ಖಂಡಿಸಿದ್ದೇ ಐಎಂಎಫ್ ನ ಇಂದಿನ ಚೀಫ್ ಎಕಾನಮಿಸ್ಟ್ ಆಗಿರುವ ಗೀತಾ ಗೋಪಿನಾಥ್, ಆದ್ದರಿಂದ ಈಗ ಸರ್ಕಾರದ ಸಚಿವರು ಐಎಂಎಫ್ ಹಾಗೂ ಡಾ.ಗೀತಾ ಗೋಪಿನಾಥ್ ಅವರ ವಿರುದ್ಧದ ವಾಗ್ದಾಳಿ ಹಾಗೂ ಆಕ್ಷೇಪಗಳಿಗೆ ನಾವು ಸಜ್ಜಾಗಬೇಕಿದೆ ಎಂದು ಚಿದಂಬರಂ ಹೇಳಿದ್ದಾರೆ.
 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap