ಗೋವಾ ಸಿಎಂ ಪರಿಕರ್ ನಿಧನ …!!

ಗೋವಾ:

       ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು ತಮ್ಮ ಕೆಲಸಕ್ಕೆ ಮೋಸ ಮಾಡದೆ ವೃತ್ತಿ ನಿಷ್ಠೆ ತೋರಿದ್ದ ಶ್ರೀ ಮನೋಹರ್ ಪರಿಕರ್ ಅವರು ಇಂದು ನಿಧನರಾಗಿದ್ದಾರೆ.

          ಅವರು ಜನಿಸಿದ್ದು ಡಿಸೆಂಬರ್ 13-12- 955 ರಂದು ಗೋವಾದ ಮಾಪುಸದಲ್ಲಿ. ಮಾರ್ಗೋವಾದ ಲಯೋಲಾ ಪ್ರೌಢಶಾಲೆಯಲ್ಲಿ ಮರಾಠಿಯಲ್ಲಿ ವಿದ್ಯಾಭ್ಯಾಸ ಮಾಡಿದ ಪರಿಕರ್, ಐಐಟಿ ಬಾಂಬೆಯಲ್ಲಿ ಮೆಟಲರ್ಜಿಕಲ್ ಎಂಜಿನಿಯರಿಂಗ್ ನಲ್ಲಿ 1978ರಲ್ಲಿ ಪದವಿ ಪಡೆದರು. ಐಐಟಿಯಲ್ಲಿ ವಿದ್ಯಾಭ್ಯಾಸ ಮಾಡಿ, ಭಾರತದ ರಾಜ್ಯವೊಂದಕ್ಕೆ ಶಾಸಕರಾಗಿ ಆಯ್ಕೆಯಾದ ಮೊದಲ ವ್ಯಕ್ತಿ ಮನೋಹರ್ ಪರಿಕರ್.

         ಪ್ರಧಾನಿ ಮೋದಿ ಅವರೇ ಮನೋಹರ್ ಪರಿಕರ್ ಅವರನ್ನು ರಕ್ಷಣಾ ಖಾತೆ ನಿರ್ವಹಿಸಲು ಕರೆಸಿಕೊಂಡಿದ್ದರು. ಅರುಣ್ ಜೇಟ್ಲಿ ಅವರಿಂದ ಆ ಹುದ್ದೆ ವಹಿಸಿಕೊಂಡ ಪರಿಕರ್, ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸಿದ್ದರು. ರಕ್ಷಣಾ ಸಚಿವಾಲಯದಲ್ಲಿ ಹಿಂದಿನ ಸರಕಾರದಲ್ಲಿ ನಡೆದಿದ್ದ ಹಲವು ಹಗರಣ ಬಯಲಿಗೆ ಎಳೆದಿದ್ದರು. ಅವರು ಮತ್ತೆ ಗೋವಾ ಮುಖ್ಯಮಂತ್ರಿ ಆದರು. ದೀರ್ಘಾವಧಿ ಅನಾರೋಗ್ಯದಿಂದ ಬಳಲಿ, ಸಾವನ್ನಪ್ಪಿದ್ದಾರೆ. ಮನೋಹರ್ ಪರಿಕರ್ ಗೆ ಹದಿನೆಂಟು ವರ್ಷದ ಹಿಂದೆಯೇ ಪತ್ನಿ ತೀರಿಕೊಂಡಿದ್ದರು. ಉತ್ಪಲ್ ಪರಿಕರ್, ಅಭಿಜಾತ್ ಪರಿಕರ್ ಎಂಬಿಬ್ಬರು ಮಕ್ಕಳಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link