ಮಹದಾಯಿ ವಿವಾದ : ಮತ್ತೆ ತಕರಾರು ಎತ್ತಿದ ಗೋವಾ..!

ಪಣಜಿ

    ದೇಶದಲ್ಲಿ ಮೂರು ರಾಜ್ಯಗಳ ನಡುವೆ ದೊಡ್ಡ ವಿವಾದವಾಗಿರುವ ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ಗೋವಾ ಮತ್ತೆ ತಕರಾರು ಎತ್ತಿದೆ. ಮಹದಾಯಿ ಯೋಜನೆಗೆ ಒಪ್ಪಿಗೆ ಕೊಟ್ಟಿರುವ ನಿರ್ಧಾರ ವಿರೋಧಿಸಿ ಗೋವಾ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ ಮತ್ತು ನಿನ್ನೆ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಸಹ ನಡೆಸಿತು.

    ನೆರೆಯ ರಾಜ್ಯದ ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಲು ಕೇಂದ್ರ ಸರ್ಕಾರ ಈ ಯೋಜನೆಗೆ ಒಪ್ಪಿಗೆ ನೀಡಿದ್ದು ಇದು ಪಕ್ಷಪಾತದ ಧೋರಣೆಯಾಗಿದೆ ಎಂದು ವಿವಾದವನ್ನು ನ್ಯಾಯ ಸಮ್ಮತವಾಗಿ ಬಗೆಹರಿಸದೆ ಚುನಾವಣಾ ಸರಕಾಗಿ ಬಳಸಿಕೊಳ್ಳಲಾಗಿದೆ ಎಂದು ಕಾಂಗ್ರಸ್ ಆರೋಪಿಸಿದೆ.

   ಮಹದಾಯಿ ಯೋಜನೆ ವಿವಾದದ ವಿಚಾರ ಸುಪ್ರೀಂಕೋರ್ಟ್ ಮುಂದಿದೆ. ಮಹದಾಯಿ ನ್ಯಾಯಾಧೀಕರಣದ ಮುಂದೆಯೂ ಬಾಕಿ ಇದೆ. ಇಂತಹ ಸಂದರ್ಭದಲ್ಲಿ ಗೋವಾದ ವಾದವನ್ನು ಆಲಿಸದೇ ಏಕಪಕ್ಷೀಯವಾಗಿ ಯೋಜನೆಗೆ ಒಪ್ಪಿಗೆ ಸೂಚಿಸಿದ್ದು ಸರಿಯಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಗೋವಾ ಜನರು ರಾಜ್ಯದ ಜೀವನದಿಯಾದ ಮಹದಾಯಿ ನದಿ ನೀರನ್ನು ಯಾವುದೇ ತಿರುಗಿಸಲು ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡುವುದಿಲ್ಲ ಎಂದು ಗೋವಾ ಕಾಂಗ್ರೆಸ್ ಪತ್ರದಲ್ಲಿ ತಿಳಿಸಿದೆ. ಕೆಲವು ದಿನಗಳ ಹಿಂದೆ ಗೋವಾ ಮುಖ್ಯಮಂತ್ರಿ ಸಹ ಮಹದಾಯಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು.

    ಪರಿಸರ ಇಲಾಖೆ ಕಳಸಾ-ಬಂಡೂರಿ ಯೋಜನೆಗೆ ಒಪ್ಪಿಗೆ ನೀಡಿದೆ. ನೈಸರ್ಗಿಕ ವೈವಿದ್ಯತೆಯನ್ನು ನಾಶಮಾಡುವಂತಹ ಯೋಜನೆಯನ್ನು ಕರ್ನಾಟಕ ಸರ್ಕಾರ 841 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಿದೆ. ಯೋಜನೆಯಿಂದಾಗಿ ಗೋವಾದ ನೈಸರ್ಗಿಕ ವೈವಿದ್ಯತೆಗೆ ಧಕ್ಕೆ ಉಂಟಾಗಲಿದೆ ಎಂದು ಗೋವಾ ಕಾಂಗ್ರೆಸ್ ಪತ್ರದಲ್ಲಿ ಆತಂಕ ವ್ಯಕ್ತವಪಡಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap