ಮಳೆನೀರು ಕೊಯ್ಲು ಹಾಕಿಸಲು 3 ತಿಂಗಳ ಗಡುವು ನೀಡಿದ ಸರ್ಕಾರ..!

ಚೆನ್ನೈ:

     ರಾಜ್ಯದಲ್ಲಿರುವ ಖಾಸಗಿ, ಸರ್ಕಾರಿ, ಶಿಕ್ಷಣ ಸಂಸ್ಥೆಗಳು ಮತ್ತು ಕಟ್ಟಡಗಳಿಗೆ  ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಹಾಕಿಸಲು ತಮಿಳುನಾಡು ಸರ್ಕಾರ ಮೂರು ತಿಂಗಳ ಗಡುವು ನೀಡಿದೆ . ಇದನ್ನು ಪಾಲಿಸದವರಿಗೆ ರಾಜ್ಯ ಪುರಸಭೆ ಮತ್ತು ಆಡಳಿತ ಸಚಿವ ಎಸ್‌ಪಿ ವೇಲುಮಣಿ ಅವರ ಪ್ರಕಾರ ನೋಟಿಸ್ ನೀಡಲಾಗುವುದು ಮತ್ತು ಸರ್ಕಾರದ ಕ್ರಮಕ್ಕೆ ಗುರಿಯಾಗುತ್ತಾರೆ ಎಂದು ತಿಳಿಸಿದ್ದಾರೆ.

     ರಾಜ್ಯ ಸರ್ಕಾರ ನಡೆಸಿದ ಲೆಕ್ಕಪರಿಶೋಧನಾ ಸಭೆಯಲ್ಲಿ  ರಾಜ್ಯದಲ್ಲಿ ಕನಿಷ್ಠ ಐದು ಲಕ್ಷ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ಇಲ್ಲ ಎಂದು ತಿಳಿದುಬಂದಿದೆ. ಈ ವರ್ಷ ರಾಜ್ಯದಲ್ಲಿ 14 ಪುರಸಭೆ ನಿಗಮಗಳು ಮತ್ತು 121 ಪುರಸಭೆಗಳನ್ನು ಸಮೀಕ್ಷೆ ಮಾಡಲಾಗಿದ್ದು, ಪತ್ರಿಕಾಗೋಷ್ಠಿಯಲ್ಲಿ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದೆ.

    ಚೆನ್ನೈನಲ್ಲಿನ 200 ವಾರ್ಡ್‌ಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಕಟ್ಟಡಗಳನ್ನು 2003 ರ ಆದೇಶದ ಅನುಸಾರ ಮತ್ತು ನೀರಿನ ಸಂರಕ್ಷಣಾ ವ್ಯವಸ್ಥೆಗಳ ಗಾತ್ರ ಮತ್ತು ಒಳಚರಂಡಿ ವ್ಯವಸ್ಥೆಗೆ ಸಂಬಂಧಿಸಿದ ನಿಯಮಗಳನ್ನು ಅನುಸರಿಸಲಾಗಿದೆಯೇ ಎಂದು ಪರಿಶೀಲನೆ ನಡೆಸಲಾಗಿ  ಇವುಗಳಲ್ಲಿ, ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ರಾಜ್ಯದಲ್ಲಿ ಸುಮಾರು 1.36 ಲಕ್ಷ ಕಟ್ಟಡಗಳಲ್ಲಿ ಮಾತ್ರ ಸರಿಯಾಗಿ ಸ್ಥಾಪಿಸಲಾಗಿದೆ ಮತ್ತು ನಿರ್ವಹಿಸಲಾಗಿದೆ ಮತ್ತು 3,850 ಕಟ್ಟಡಗಳಲ್ಲಿ ಹೊಸದಾಗಿ ನಿರ್ಮಿಸಲಾಗಿದೆ. ಆದಾಗ್ಯೂ,ಇನ್ನೂ ಮಳೆನೀರು ಕೊಯ್ಲು ವ್ಯವಸ್ಥೆ ಆಗದ ಕಟ್ಟಡಗಳ ಸಂಖ್ಯೆ ಸುಮಾರು 60,461 ಮತ್ತು 37,131 ಕಟ್ಟಡಗಳಲ್ಲಿ ನಿರ್ವಹಣೆಯ ಅಗತ್ಯವಿದೆ.

    ಚೆನ್ನೈ ಹೊರತುಪಡಿಸಿ ಪುರಸಭೆಗಳಲ್ಲಿ 15.89 ಲಕ್ಷ ಕಟ್ಟಡಗಳನ್ನು ಗುರುತಿಸಲಾಗಿದ್ದು. ಈ 10.19 ಲಕ್ಷ ಕಟ್ಟಡಗಳಲ್ಲಿ ತಮ್ಮ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ನವೀಕರಿಸಲು ಆದೇಶಿಸಲಾಗಿದೆ ಮತ್ತು 4.98 ಲಕ್ಷ ಕಟ್ಟಡಗಳಿಗೆ ಹೊಸ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಕಾಕಿಸಲು ನೋಟಿಸ್ ನೀಡಲಾಗಿದೆ. ಈ ವರ್ಷದ ನವೆಂಬರ್ ವೇಳೆಗೆ 31.96 ಲಕ್ಷ ಕಟ್ಟಡಗಳನ್ನು ಮತ್ತೆ ಪರಿಶೀಲಿನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap