ಹೈದರಾಬಾದ್
ದೇಶಾದ್ಯಂತ ಕೊರೊನಾ ಲಾಕ್‌ಡೌನ್ ಬೆನ್ನಲ್ಲೇ ತೆಲಂಗಾಣ ಸರ್ಕಾರ ಮಹತ್ವದ ಆದೇಶ ನೀಡಿದೆ.ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ಶಾಸಕರ ವೇತನ ಹಾಗೂ ಪಿಂಚಣಿ ಮೊತ್ತದಲ್ಲಿ ಭಾರಿ ಕಡಿತ ಮಾಡುವುದಾಗಿ ತೆಲಂಗಾಣದ ಕೆ. ಚಂದ್ರಶೇಖರ್ ರಾವ್ ಸರ್ಕಾರ ಘೋಷಿಸಿದೆ.
ಇಡೀ ವಿಶ್ವವೇ ಕೊರೊನಾ ಭೀತಿ ಎದುರಿಸುತ್ತಿವೆ.ತೆಲಂಗಾಣಲ್ಲಿ ಒಂದೇ ದಿನ ಆರು ಮಂದಿ ಸಾವನ್ನಪ್ಪಿದ್ದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.ಕೊರೊನಾ ಕರಿನೆರಳಿನ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ 12 ಸಾವಿರ ಕೋಟಿ ರೂ. ಖೋತಾ ಆಗಿದೆ. ಹೀಗಾಗಿ, ನೌಕರರ ವೇತನ ಕತ್ತರಿಗೆ ನಿರ್ಧರಿಸಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಸಿಎಂ, ಸಚಿವರು, ಶಾಸಕರು, ಜನಪ್ರತಿನಿಧಿಗಳ ಶೇ.75 ರಷ್ಟು ವೇತನ, ಐಎಎಸ್ ಅಧಿಕಾರಿಗಳ ಶೇ.60, ಇತರೆ ನೌಕರರ ಶೇ.50 ಹಾಗೂ ಡಿ ದರ್ಜೆ ಹಾಗೂ ಗುತ್ತಿಗೆ ನೌಕರರ ಶೇ.10 ರಷ್ಟು ವೇತನ ಕಡಿತಗೊಳಿಸುವುದಾಗಿ ಹೇಳಿದೆ. ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾಣವಾಗಲಿದೆ. ದೇಶದಲ್ಲಿ ಒಂದೇ ದಿನ 12 ಮಂದಿ ಮೃತಪಟ್ಟಿದ್ದು, ಒಂದೇ ದಿನ 227 ಕೊರೊನಾ ಹೊಸ ಪ್ರಕರಣಗಳು ದಾಖಲಾಗಿವೆ.