ಜಿಎಸ್ ಟಿ ವಾರ್ಷಿಕ ರಿಟರ್ನ್ ಸಲ್ಲಿಕೆ ಅವಧಿ ವಿಸ್ತರಣೆ…!

ನವದೆಹಲಿ:

    ಕೋವಿಡ್ ಸಂಕಷ್ಟದಿಂದಾಗಿ ಜಿಎಸ್ ಟಿ ಪಾವತಿದಾರರಿಗೆ 2018-19ನೇ ಸಾಲಿನ ವಾರ್ಷಿಕ ಜಿಎಸ್ ಟಿ ಪಾವತಿಗೆ ಸೆಪ್ಟೆಂಬರ್ 30ರವರೆಗೆ ಈ ಹಿಂದೆ ಕಾಲಾವಕಾಶ ನೀಡಿತ್ತು. ಆದರೆ ಇದೀಗ 2018-2019ರ ಸಾಲಿನ ಜಿಎಸ್ ಟಿ ವಾರ್ಷಿಕ ರಿಟರ್ನ್ ಮತ್ತು ಆಡಿಟ್ ರಿಪೋರ್ಟ್ ಸಲ್ಲಿಕೆಯ ಅವಧಿಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಿದೆ.

     ಕೇಂದ್ರ ಚುನಾವಣಾ ಆಯೋಗದಿಂದ ಚುನಾವಣಾ ನೀತಿ ಸಂಹಿತೆ ಕುರಿತಂತೆ ಸ್ಪಷ್ಟ ಮಾಹಿತಿ ಪಡೆದ ನಂತರ ಕೇಂದ್ರ ಸರ್ಕಾರ 2018-19ರ ಸಾಲಿನಿಂದ 30.09.2020 ರಿಂದ 31.10.2020ರವರೆಗಿನ ಜಿಎಸ್ ಟಿಆರ್ 9 ಮತ್ತು ಜಿಎಸ್ ಟಿಆರ್ 9ಸಿ ವಾರ್ಷಿಕ ಪಾವತಿಯ ದಿನಾಂಕವನ್ನು ವಿಸ್ತರಿಸಿರುವುದಾಗಿ ಸಿಬಿಐಸಿ ಟ್ವೀಟ್ ಮಾಡಿದೆ.

      ಮೇ ತಿಂಗಳಿನಲ್ಲಿ ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ 2018-19ನೇ ಸಾಲಿನ ವಾರ್ಷಿಕ ಜಿಎಸ್ಟಿ ಪಾವತಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಸೆಪ್ಟೆಂಬರ್ 30ರವರೆಗೆ ಸರಕು ಮತ್ತು ಸೇವಾ ತೆರಿಗೆ ಪಾವತಿದಾರರಿಗೆ ಅವಕಾಶ ನೀಡಲಾಗಿತ್ತು.

        ಜಿಎಸ್ ಟಿಆರ್ 9 ಸರಕು ಮತ್ತು ಸೇವಾ ತೆರಿಗೆ ಅಡಿಯಲ್ಲಿ ನೋಂದಾಯಿಸಲ್ಪಟ್ಟ ತೆರಿಗೆದಾರರು ಸಲ್ಲಿಸಬೇಕಾದ ವಾರ್ಷಿಕ ಪಾವತಿ ಇದಾಗಿದೆ. ಇದು ವಿವಿಧ ತೆರಿಗೆ ಮುಖ್ಯಸ್ಥರಡಿಯಲ್ಲಿ ಸ್ವೀಕರಿಸಿದ ಬಾಹ್ಯ ಮತ್ತು ಆಂತರಿಕ ಸರಬರಾಜುಗಳ ವಿವರಗಳನ್ನು ಒಳಗೊಂಡಿದೆ ಎಂದು ವರದಿ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap