ಹರಿಯಾಣ: ಅತಂತ್ರದ ಹೊಸ್ತಿಲಲ್ಲಿ ವಿಧಾನಸಭೆ..!

ಚಂಡೀಘಡ

   ಲೋಕಸಭಾ ಚುನಾವಣೆ ನಂತರದಲ್ಲಿ ನಡೆದ ಮೊದಲ ಚುನಾವಣೆಯಾಗಿರುವುದರಿಂದ ಎಲ್ಲಾ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿದೆ ಅಂತಹುದರಲ್ಲಿ ಆಡಳಿತಾರೂಡ ಬಿಜೆಪಿಗೆ ಈ ಚುನಾವಣೆ ಸರ್ಕಾರದ ಮರ್ಯಾದೆಯ ಪ್ರಶ್ನೆಯೂ ಹೌದು ಅಂತಹುದರಲ್ಲಿ ಮಹಾರಾಷ್ಟ್ರ ಬಿಜೆಪಿ ಮೈತ್ರಿಕೂಟದ ಪಾಲಾದರೂ ಹರಿಯಾಣ ಮಾತ್ರ ಸದ್ಯ ಬಿಜೆಪಿಗೆ ನುಂಗಲಾರದ ತುತ್ತಾಗಿದೆ ಏಕೆಂದರೆ ಸಮೀಕ್ಷೆಗಳು ಹೇಳಿದ ಪ್ರಕಾರ ವಿಪಕ್ಷ ಕಾಂಗ್ರೆಸ್‌ಗೆ ಐದಕ್ಕಿಂತಲೂ ಕಡಿಮೆ ಸೀಟುಗಳಷ್ಟೆ ಬರುತ್ತವೆ ಎನ್ನಲಾಗಿತ್ತು .

    ಆದರೆ ನಿರೀಕ್ಷೆಗಳಲ್ಲಾ ಸುಳ್ಳಾಗಿವೆ. ಮತ ಎಣಿಕೆ ಪ್ರಾರಂಭವಾಗಿ ಎರಡು ಗಂಟೆಯಾಗುವ ವೇಳೆಗೆ ಹರಿಯಾಣ ರಾಜಕೀಯದ ಚಿತ್ರಣವೇ ಬದಲಾಗಿದೆ 90 ಕ್ಷೇತ್ರಗಳ ಮುನ್ನಡೆಯೂ ಹೊರಗೆ ಬಿದ್ದಿದ್ದು, 90 ರಲ್ಲಿ ಬಿಜೆಪಿ 42 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಇನ್ನು 5 ಕ್ಕಿಂತಲ್ಲೂ ಕಡಿಮೆ ಸೀಟು ಬರುತ್ತವೆ ಎಂದಿದ್ದ ಕಾಂಗ್ರೆಸ್‌ 32 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಐಎನ್‌ಎಲ್‌ಡಿ 2 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ ಉಳಿದ ಕ್ಷೇತ್ರಗಳಲ್ಲಿ ಜನನಾಯಕ ಜನತಾ ಪಕ್ಷ ಮುನ್ನಡೆಯಲ್ಲಿವೆ ಎನ್ನಲಾಗಿದೆ.ಇದರಿಂದಾಗಿ ಹರಿಯಾಣ ಚುನಾವಣೆ ಅತಂತ್ರ ಸ್ಥಿತಿಯತ್ತ ಹೆಜ್ಜೆ ಹಾಕಿದೆ ಎನ್ನಲಾಗಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

 

Recent Articles

spot_img

Related Stories

Share via
Copy link
Powered by Social Snap