ನವದೆಹಲಿ:
ಸದ್ಯ ದೇಶದ ಆಟೋಮೊಬೈಲ್ ಕ್ಷೇತ್ರದಲ್ಲಿ ಉಂಟಾಗಿರುವ ಹಿಂಜರಿತ ತಡೆಗಾಗಿ ಮೊದಲ ಹಂತದಲ್ಲಿ ದ್ವಿಚಕ್ರ ವಾಹನಗಳ ದರವನ್ನು ಕಡಿತಗೊಳಿಸುವುದು ಮತ್ತು ನಾಲ್ಕು ಚಕ್ರಗಳ ಮೇಲಿನ ತೆರಿಗೆ ಕಡಿತವನ್ನು ನಂತರದ ಹಂತಕ್ಕೆ ಮುಂದೂಡುವುದು ಎಂದು ಹೀರೋ ಮೊಟೊಕಾರ್ಪ್ ಸರ್ಕಾರವನ್ನು ಒತ್ತಾಯಿಸಿದೆ.
ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯ ಈ ಕ್ರಮವು ಸಂಭಾವ್ಯ ಆದಾಯ ನಷ್ಟವನ್ನು ತಡೆಯಲು ಸಹಾಯ ಮಾಡುವುದಲ್ಲದೇ ಅದೇ ಸಮಯದಲ್ಲಿ ದೇಶಾದ್ಯಂತ ಸುಮಾರು 20 ಮಿಲಿಯನ್ ಸಂಭವನೀಯ ದ್ವಿಚಕ್ರ ವಾಹನ ಖರೀದಿದಾರರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಹೇಳಿದರು.
“ಸರ್ಕಾರದ ಆದಾಯದ ಮೂಲವಾದ ಜಿ ಎಸ್ ಟಿ ಕಡಿತದಿಂದ ತೆರಿಗೆ ಸಂಗ್ರಹದ ಮೇಲೆ ಪ್ರತಿಕೂಲ ಪರಿಣಾಮ ಆಗುವುದೆಂದು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಇದರಿಂದ ವಾಹನ ಮಾರಾಟವು ಹೆಚ್ಚಲಿದೆ ಮತ್ತು ನಾವು ಎರಡನ್ನು ತುಂಬಾ ನಾಜೂಕಾಗಿ ಎದುರಿಸಬೇಕಾಗಿದೆ ಎಂದಿದ್ದಾರೆ.
ಇನ್ನು ನಾವು ಕೇಳಿರಿವ ಜಿ ಎಸ್ ಟಿ ಕಡಿತವನ್ನು ಮುಂದಿನ ದಿನ ಮಾನಗಳಲ್ಲಿ ಪ್ರಯಾಣಿಕ ವಾಹನಕ್ಕೂ ವಿಸ್ತರಿಸುವ ಯೋಚನೆ ಮಾಡಿದರೆ ನಮ್ಮ ದೇಶದ ಈಗಿನ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ