ಶರದ್ ಪವಾರ್ ವಿರುದ್ಧ ಎಫ್ ಐ ಆರ್ ಗೆ ಹೈಕೋರ್ಟ್ ಸೂಚನೆ.!

ಮುಂಬೈ :

  ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕಿನಲ್ಲಿ ನಡೆದ 1,000 ಕೋಟಿ ರೂ.ಗಳ ಹಗರಣದಲ್ಲಿ ಎನ್ ಸಿ ಪಿ ಅಧ್ಯಕ್ಷ ಶರದ್ ಪವಾರ್ ಮತ್ತು  70 ಜನರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ . 

   ಹೈಕೋರ್ಟ್ ನ ದ್ವಿಸದಸ್ಯ ವಿಭಾಗೀಯ ಪೀಠವು ಪ್ರಕರಣಕ್ಕೆ ನಂಬಲರ್ಹ ಸಾಕ್ಷ್ಯಾಧಾರಗಳಿವೆ ಎಂದು ಅಭಿಪ್ರಾಯಪಟ್ಟಿದ್ದು ಮುಂದಿನ   ಕಾನೂನು ಕ್ರಮ ಪ್ರಾರಂಭಿಸಲು ಆರ್ಥಿಕ ಅಪರಾಧಗಳ ವಿಭಾಗಕ್ಕೆ (ಇಒಡಬ್ಲ್ಯೂ) ನಿರ್ದೇಶನ ನೀಡಿದೆ.ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರೊಂದಿಗೆ ಎನ್‌ಸಿಪಿ ನಾಯಕ ಜಯಂತ್ ಪಾಟೀಲ್ ಅವರ ಹೆಸರನ್ನು ಸಹ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

    2007-2011ರ ನಡುವೆ ರಾಜ್ಯದ ಸಹಕಾರಿ ಬ್ಯಾಂಕ್‌ಗೆ ಸುಮಾರು 1,000 ಕೋಟಿ ರೂ ನಷ್ಟ ಉಂಟು ಮಾಡಿರುವ ಆರೋಪದ ಮೇಲೆ ಅವರ ವಿರುದ್ಧ ಎಫ್ ಐ ಆರ್ ದಾಖಲು ಮಾಡಲು ಮುಂದಾಗಿದೆ . ಮರುಪಾವತಿ ಮತ್ತು ಬಾಕಿ ವಸೂಲಿಗಳಲ್ಲಿ ಗೋಲ್ ಮಾಲ್ ಮಾಡಿದ ಆರೋಪ ಅವರ ಮೇಲಿದೆ.ಆದರೆ ಈ ತನಕ ಯಾವುದೇ ಎಫ್‌ಐಆರ್ ದಾಖಲಾಗಿರಲಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap