ಹಿಂದುತ್ವ ದೇಶ ವಿಭಜಿಸುತ್ತದೆ: ಶಶಿ ತರೂರ್…!!

ನವದೆಹಲಿ:

       ಭಾರತದಲ್ಲಿ ಸರ್ವಧರ್ಮ ಸಮ್ನವಯತೆ ಮುಖ್ಯವಾದ ಒಂದು ಪ್ರಮುಖವಾದ ನೀತಿಮಂತ್ರ ಹೀಗಿರುವಾಗ ಬಿಜೆಪಿ ಮತ್ತು ಇತರೆ ಹಿಂದುತ್ವವಾದಿ ಸಂಘಟನೆಗಳು ಪ್ರತಿಪಾದಿಸುವ ಹಿಂದುತ್ವ ಸಿದ್ಧಾಂತವು ದೇಶವನ್ನೇ ವಿಭಜಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಮಾಡಿರುವ ಟ್ವೀಟ್ ವಿರುದ್ಧ ಬಿಜೆಪಿ ಹಾಗೂ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

        ತಮಿಳುನಾಡು   ಒಬ್ಬ ವಿದ್ಯಾರ್ಥಿಗೆ ಹಿಂದಿ ಮಾತನಾಡಲು ಬರಲಿಲ್ಲವೆಂದು ಮುಂಬೈ ವಿಮಾನ ನಿಲ್ದಾಣದ ಇಮೆಗ್ರೇಶನ್ ಕೌಂಟರ್ ಅಧಿಕಾರಿಯೊಬ್ಬ ಅವಮಾನ ಮಾಡಿದ್ದ ಸುದ್ದಿಯನ್ನು ಮುಖ್ಯವಾಗಿಟ್ಟುಕೊಂಡು ಶಶಿ ತರೂರ್ ಅವರು ಮಾಡಿರುವ ಟ್ವೀಟ್ ಈಗ ಬಿಜೆಪಿ ಹಾಗು ನೆಟ್ಟಿಗರ ಕೈಗೆ ಅಸ್ತ್ರವಾಗಿ ಸಿಕ್ಕಿದೆ ಅದನ್ನು ತಿವ್ರ ತರದಲ್ಲಿ ಬಿಜೆಪಿ ಪ್ರತಿಬಟಿಸುತ್ತಿದೆ ಎಂದು ತಿಇದು ಬಂದಿದೆ.

ಅಷ್ಟಕ್ಕೂ ಟ್ವೀಟ್ ನಲ್ಲಿರುವುದೇನು?????

        ‘ಹಿಂದಿ, ಹಿಂದೂ, ಹಿಂದುತ್ವದ ಸಿದ್ಧಾಂತವು ದೇಶವನ್ನೇ ವಿಭಸುತ್ತಿದೆ. ನಮಗೆ ಏಕತೆ ಬೇಕೇ ಹೊರತು ಏಕರೂಪವಲ್ಲ’ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

        ಶಶಿ ತರೂರ್ ಅವರ ಟ್ವೀಟ್ ನೋಡಿದ ನೆಟ್ಟಿಗರು ತಿರುಗೇಟು ನೀಡಿದ್ದಾರೆ. ‘ಹಿಂದುತ್ವ ದೇಶವನ್ನು ಒಗ್ಗೂಡಿಸಲು ಶ್ರಮಿಸುತ್ತಿದೆ. ಆದರೆ ಕಾಂಗ್ರೆಸ್ ನಾಯಕರು ಹಿಂದುತ್ವವನ್ನು ವಿರೋಧಿಸುತ್ತಿದ್ದಾರೆ. ಇದಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರೇರಣೆ ನೀಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರಾ ಟಾಂಗ್ ಕೊಟ್ಟಿದ್ದಾರೆ.

         ಹಿಂದಿ ಒಂದು ಭಾಷೆ. ಅದು ಹಿಂದುತ್ವ ಹಾಗೂ ಹಿಂದೂ ಸಿದ್ಧಾಂತದ ಜೊತೆಗೆ ಹೊಂದಿಕೊಂಡಿಲ್ಲ. ಹಾಗಾದರೆ ಹಿಂದಿ ಮಾತನಾಡದ ಜನರ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ನಿಮಗೆ ಇಸ್ಲಾಂ ಹಾಗೂ ಇಸ್ಲಾಮಿಸಂ ಅಂಥ ಟ್ವೀಟ್ ಮಾಡಲು ಆಗುತ್ತದೆಯೇ ಎಂದು ಸೀಮಾ ಚೌಧರಿ ಎಂಬವರು ಟ್ವೀಟ್ ಮಾಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link