ಮುಂಬೈ:
‘ಎಂತಹುದೇ ರಾಜಕೀಯ ಬಿರುಗಾಳಿಗಳು ಎದುರಾದರೂ ಎದುರಿಸುತ್ತೇನೆ. ಹಾಗೆಯೇ ಕೊರೋನಾವೈರಸ್ ವಿರುದ್ಧವೂ ಹೋರಾಡುತ್ತೇನೆ ಎಂದು ಠಾಕ್ರೆ ಭಾನುವಾರ ಟಿವಿ ವಾಹಿನಿ ಮೂಲಕ ಮಾಡಿದ ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದಾರೆ.‘ಕಳೆದ ಹಲವು ದಿನಗಳಿಂದ ಕೊರೋನಾವೈರಸ್ ತಡೆಗೆ ನಾವು ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ. ಇದರ ಮಧ್ಯೆ ರಾಜಕೀಯ ಬಿಕ್ಕಟ್ಟಿನ ವಿರುದ್ಧ ಹೋರಾಡುತ್ತಿದ್ದೇವೆ. ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಕೋವಿಡ್-19 ಪ್ರಕರಣಗಳು 10 ಲಕ್ಷ ದಾಟಿದ ಒಂದು ದಿನದ ನಂತರ, ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ತಮ್ಮ ಸರ್ಕಾರ ಪರಿಣಾಮಕಾರಿ ಕೆಲಸ ಮಾಡಿದೆ ಎಂದು ಠಾಕ್ರೆ ಹೇಳಿದರು.
ಮುಂಬೈನಲ್ಲಿ ನಟಿ ಕಂಗನಾ ರನೌತ್ ಅವರ ಬಂಗಲೆ ಉರುಳಿಸುವಿಕೆ ಮತ್ತು ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಅವರ ಸರ್ಕಾರ ನಿಭಾಯಿಸಿದ ರೀತಿ ಕುರಿತು ರಾಜಕೀಯ ಟೀಕೆಗಳ ಹಿನ್ನೆಲೆಯಲ್ಲಿ ಮಾತನಾಡಿದ ಠಾಕ್ರೆ, ರಾಜಕೀಯ ಬಿಕ್ಕಟ್ಟಿನ ವಿರುದ್ಧವೂ ಹೋರಾಡುವುದಾಗಿ ಜನರಿಗೆ ಭರವಸೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ