ಕಿಂಗ್ ಫಿಷರ್ ನ ಎಲ್ಲಾ ಸಾಲ ಮರುಪಾವತಿಸಲು ನಾನು ಸಿದ್ದನಿದ್ದೇನೆ : ಮಲ್ಯ

ನವದೆಹಲಿ;

       ಲಂಡನ್ ನಲ್ಲಿ ತಲೆ ಮರಿಸಿಕೊಂಡಿರುವ ಭಾರತೀಯ ಮೂಲದ ಉದ್ಯಮಿ ವಿಜಯ್ ಮಲ್ಯ  ಕಿಂಗ್ ಫಿಶರ್ ಏರ್’ಲೈನ್ಸ್  ಬ್ಯಾಂಕ್ ಗಳಿಂದ ಕಿಂಗ್ ಫಿಶರ್ ಏರ್’ಲೈನ್ಸ್ ಪಡೆದಿದ್ದ ಶೇ.100ರಷ್ಟು ಸಾಲವನ್ನು ಮರುಪಾವತಿ ಮಾಡಲು ಸಿದ್ಧವಿದ್ದೇನೆಂದು  ಎಂದು ಹೇಳಿದ್ದಾರೆ. 

     ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಹಣವನ್ನು ಪಾವತಿಸಲು ಪದೇ ಪದೇ ಪ್ರಸ್ತಾಪ ಮಾಡುತ್ತಿದ್ದರೂ, ಬ್ಯಾಂಕುಗಳು ಹಣವನ್ನು ತೆಗೆದುಕೊಳ್ಳಲು ಯಾವುದೇ ಆಸಕ್ತಿ ತೋರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಜಾರಿ ನಿರ್ದೇಶನಾಲಯವು ತನ್ನ ಕಂಪನಿಯ ಲಗತ್ತಿಸಲಾದ ಆಸ್ತಿಗಳನ್ನು ಬಿಡುಗಡೆ ಮಾಡಲು ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ದೇಶವು ಕೊರೋನಾ ಎಂಬ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದ್ದು, ಈ ಸಮಯದಲ್ಲಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ನನ್ನ ಮನವಿಯನ್ನು ಆಲಿಸುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 

      ಭಾರತೀಯ ಕಂಪನಿಗಳಿಂದ ಕಿಂಗ್ ಫಿಶರ್ ಏರ್’ಲೈನ್ಸ್ ಪಡೆದಿದ್ದ ಶೇ.100ರಷ್ಟು ಸಾಲವನ್ನು ಮರು ಪಾವತಿ ಮಾಡಲು ಚಸನಾನು ಸಿದ್ಧನಿದ್ದೇನೆ. ಆದರೆ, ಬ್ಯಾಂಕುಗಳೇ ಹಣವನ್ನು ಮರು ಪಡೆಯಲು ಆಸಕ್ತಿ ತೋರುತ್ತಿಲ್ಲ. ಬ್ಯಾಂಕುಗಳ ಆಜ್ಞೆಯ ಮೇರೆಗೆ ಈಗಾಗಲೇ ವಶಕ್ಕೆ ಪಡೆದುಕೊಂಡಿರುವ ದಾಖಲೆಗಳನ್ನು ನೀಡಲ ಜಾರಿ ನಿರ್ದೇಶನಾಲಯ ಸಿದ್ಧವಲ್ಲ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ವಿತ್ತ ಸಚಿವೆ ನನ್ನ ಮನವಿ ಆಲಿಸುತ್ತಾರೆಂಬ ಭರವಸೆ ಇದೆ ಎಂದಿದ್ದಾರೆ. ಇದೇ ವೇಳೆ ಮೋದಿಯವರು ದೇಶವ್ಯಾಪ್ತಿ ಘೋಷಣೆ ಮಾಡಿಲುವ ಲಾಕ್ ಡೌನ್ ಕುರಿತಂತೆ ಮಾತನಾಡಿರುವ ಅವರು, ಇದೊಂದು ಚಿಂತಿಸಲೂ ಸಾಧ್ಯವಾಗದ ನಿರ್ಧಾರವಾಗಿದೆ. ಲಾಕ್ ಡೌನ್ ಕಾರಣದಿಂದಾಗಿ  ನನ್ನ ಎಲ್ಲಾ ಕಂಪನಿಗಳ ಕಾರ್ಯಗಳು ಸ್ಥಗಿತಗೊಂಡಿವೆ. ಆದರೆ, ನೌಕರರನ್ನು ಮನೆಗೆ ಕಳುಹಿಸುತ್ತಿಲ್ಲ. ವೇತನವನ್ನು ನೀಡಲಾಗುತ್ತಿದೆ. ಸರ್ಕಾರದ ನಡೆ ಉತ್ತಮವಾಗಿದೆ. ಸರ್ಕಾರ ನನಗೆ ಸಹಾಯ ಮಾಡಬೇಕಿದೆ ಎಂದು ಹೇಳಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap