ನವದೆಹಲಿ:
ತೀವ್ರ ವಿವಾದ ಕೆರಳಿಸಿದ್ದ ರಾಹುಲ್ ಗಾಂಧಿಯವರ ಚೌಕಿದಾರ್ ಚೋರ್ ಹೈ ಹೇಳಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ಮುಂದೆ ಕ್ಷಮೆ ಕೋರಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಚೌಕಿದಾರ್ ಚೋರ್ ಹೈ ಎಂಬ ಹೇಳಿಕೆ ವಿಚಾರದಲ್ಲಿ ನಾನು ಕ್ಷಮೆ ಕೋರಿರುವುದು ಕೋರ್ಟಿಗೆ ಹೊರತು ಪ್ರಧಾನಿಗಲ್ಲ ಎಂದು ಸ್ಟಷ್ಟಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ಇನ್ನು ವಿಚಾರಣೆ ಹಂತದಲ್ಲಿದ್ದು. ನ್ಯಾಯಾಲಯದ ಹೆಸರನ್ನು ಘೋಷವಾಕ್ಯದಲ್ಲಿ ತಂದಿರುವುದಕ್ಕೆ ನಾನು ಕ್ಷಮೆ ಕೋರಿದ್ದೇನೆ. ಈ ವಿಚಾರದಲ್ಲಿ ಯಾವುದೇ ಹೇಳಿಕೆ ಅಸಮರ್ಥನೀಯವಾಗುತ್ತಿತ್ತು. ನಾನು ಮೋದಿಗೆ ಅಥವಾ ಬಿಜೆಪಿಗೆ ಕ್ಷಮೆ ಕೇಳಿದ್ದಲ್ಲ ಎಂದಿದ್ದಾರೆ.
ನಾನು ಈಗಲೂ ಆ ಹೇಳಿಕೆಗೆ ಬದ್ಧನಾಗಿದ್ದೇನೆ. ಕಾಂಗ್ರೆಸ್ ನ ಆ ಘೋಷವಾಕ್ಯವನ್ನು ಹಿಂತೆಗೆದುಕೊಳ್ಳುವುದಿಲ್ಲ. ಮುಂದುವರಿಸುತ್ತೇವೆ. ದೇಶದ ಯಾವ ಮೂಲೆಗೆ ಹೋಗಿ ನೀವು ಜನರನ್ನು ಕೇಳಿ ಚೌಕಿದಾರ್ ಎಂದರೆ ಕೂಡಲೇ ಚೋರ್ ಹೈ ಎಂಬ ಪ್ರತಿಕ್ರಿಯೆ ಜನರಿಂದ ಬರುತ್ತದೆ ಎಂದರು.