ನವದೆಹಲಿ:
ಪೀಸ್ ಟೀವಿಯ ಸಂಸ್ಥಾಪಕ ನಿರ್ದೇಶಕ , ಇಸ್ಲಾಮಿಕ್ ಶಿಕ್ಷಕ, ಭಾಷಣಕಾರ ಝಾಕೀರ್ ನಾಯಕ್ ಅವರು ಭಾರತಕ್ಕೆ ಬರುವುದಕ್ಕೆ ಒಂದು ಷರತ್ತನ್ನು ವಿಧಿಸಿದ್ದಾರೆ .
ತಾನು ಅಧಕೃತವಾಗಿ ಆರೋಪಿ ಎಂದು ಸಾಬೀತಾಗುವವರೆಗೆ ತನನ್ನು ಬಂಧಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಭರವಸೆ ಕೊಟ್ಟರೆ ನಾನು ಭಾರತಕ್ಕೆ ಹಿಂತಿರುಗತ್ತೇನೆ ಎಂದು ಝಾಕೀರ್ ನಾಯಕ್ ತಿಳಿಸಿದ್ದಾರೆ.
ಭಾರತದಿಂದ ಪಲಾಯನ ಮಾಡಿದ ಝಾಕೀರ್ ನಾಯಕ್ 2016ರಿಂದಲೂ ಮಲೇಷಿಯಾದಲ್ಲಿ ವಾಸಿಸುತ್ತಿದ್ದಾರೆ. ಮಲೇಷಿಯಾ ಸರ್ಕಾರ ಅವರಿಗೆ ಶಾಶ್ವತ ನಿವಾಸಿಯ ಸ್ಥಾನಮಾನ ನೀಡಿದೆ. ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಧಾರ್ಮಿಕ ಬೋಧಕರಾದ ಝಾಕೀರ್ ನಾಯಕ್ ತಾನು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಹೊಂದಿದ್ದೇನೆ. ಮತ್ತು ಅದು ಈಗಿರುವುದಕ್ಕಿಂತ ಮುಂಚಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿತ್ತು. ಎಂದಿದ್ದಾರೆ.