ಉತ್ತರ ಪ್ರದೇಶ:
ನನಗೆ ಮತ ನೀಡಿದಿದ್ದರೆ, ನಿಮಗೆ ಶಾಪ ನೀಡುತ್ತೇನೆ ಎಂದು ಉನ್ನಾವೋ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಕ್ಷಿ ಮಹಾರಾಜ್ ಹೇಳಿಕೆ ಹೊಸ ವಿವಾದ ಸೃಷ್ಟಿಸಿದೆ.
ಒಬ್ಬ ಸನ್ಯಾಸಿಯಾಗಿ ನಾನು ನಿಮ್ಮ ಮನೆ ಬಾಗಿಲಿಗೆ ಬಂದು ಭಿಕ್ಷೆ ಬೇಡಲು ಬಂದಿದ್ದೇನೆ. ಒಂದು ವೇಳೆ ನೀವು ಭಿಕ್ಷೆ ನೀಡಿದಿದ್ದರೆ, ಶಾಪಕ್ಕೆ ಗುರಿಯಾಗುವಿರಿ. ಇದನ್ನು ನಾನು ಹೇಳುತ್ತಿಲ್ಲ. ಇದೆಲ್ಲ ಶಾಸ್ತ್ರದಲ್ಲೇ ಇದೆ. ನಾನು ಹಣ ಅಥವಾ ಭೂಮಿ ಕೇಳಲು ನಿಮ್ಮ ಬಳಿ ಬಂದಿಲ್ತಲ, ಮತ ಕೇಳಲು ಬಂದಿದ್ದೇನೆ. ನೀವು ನನಗೆ ಮತ ನೀಡಿ ಚುನಾವಣೆಯಲ್ಲಿ ಗೆಲ್ಲಿಸಿದರೆ, 1.5 ಕೋಟಿ ಭಾರತೀಯರ ಹಣೆಬರಹ ಬದಲಾಗಲಿದೆ’ ಎಂದು ಹೇಳಿದ್ದಾರೆ.
ನಿಮ್ಮ ಮನೆ ಬಾಗಿಲಿಗೆ ಬಂದು ಮತ ಕೇಳುತ್ತಿದ್ದೇನೆ. ಚುನಾವಣೆಯಲ್ಲಿ ಸನ್ಯಾಸಿಯನ್ನು ನಿರಾಕರಿಸಿದರೆ, ನಿಮ್ಮ ಕುಟುಂಬದ ಸುಖ ಸಂತೋಷವನ್ನು ತೆಗೆದುಕೊಂಡು, ಶಾಪ ನೀಡಿ ಹೋಗುತ್ತೇನೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.