ಕೊಲ್ಕೋತಾ:
ಇದೇ ತಿಂಗಳ 15ರಂದು ನಡೆಯುವ ನೀತಿ ಆಯೋಗದ ಸಭೆಗೆ ಹಾಜರಾಗಲು ನನಗೆ ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಅವರಿಗೆ ಪತ್ರ ಬರೆದಿದ್ದಾರೆ.
ಪ್ಲಾನಿಂಗ್ ಕಮೀಷನ್ ಬದಲಿಗೆ ರಚಿಸಲಾದ ನೀತಿ ಆಯೋಗಕ್ಕೆ ಯಾವುದೇ ಹಣಕಾಸಿನ ಸಾಮರ್ಥ್ಯವಿಲ್ಲ, ರಾಜ್ಯಗಳಿಗೆ ಇದರಿಂದ ನಯಾಪೈಸೆ ಹಣಕಾಸಿನ ಸಹಾಯವಾಗುವುದಿಲ್ಲ ಮತ್ತು ನೀತಿ ಆಯೋಗಕ್ಕೆ ಯಾವುದೇ ಅಧಿಕಾರ ಸಹ ಇಲ್ಲ ಎಂದು ಮಮತಾ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಈ ಮೊದಲು ಯೋಜನಾ ಆಯೋಗ ಏರ್ಪಡಿಸುತ್ತಿದ್ದ ಥಿಂಕ್ ಟ್ಯಾಂಕ್ ಸಭೆಗೂ ಗೈರಾಗುತ್ತಿದ್ದರು. ಜೂನ್ 15ರಂದು ಪ್ರಧಾನಿ ಮೋದಿ,ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದಾರೆ ಎಂದು ನೀತಿ ಆಯೋಗ ತಿಳಿಸಿದೆ.