ಶ್ರೀನಗರ:
ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರುವವರೆಗೆ ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಎನ್‌ಸಿಪಿ ನಾಯಕ ಓಮರ್ ಅಬ್ದುಲ್ಲಾ ತಿಳಿಸಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370ಯನ್ನ ಕೇಂದ್ರ ಸರಕಾರ ರದ್ದುಪಡಿಸಿ ಒಂದು ವರ್ಷವಾಗುತ್ತಿರುವ ಹಿನ್ನೆಲೆ ಓಮರ್ ಅಬ್ದುಲ್ಲಾ, ಜಮ್ಮು-ಕಾಶ್ಮೀರ ಹಾಗೂ ಲಡಾಕನ್ನ ಬೇರ್ಪಡಿಸುವ ಮೂಲಕ ತಾರತಮ್ಯ ಮಾಡಲಾಗಿದೆ.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನ ರದ್ದುಪಡಿಸಿ ಕೇಂದ್ರಾಡಳಿತ ಪ್ರದೇಶವಾಗಿಸಿದ್ದು ಅಚ್ಚರಿಯ ಸಂಗತಿಯೇನು ಆಗಿರಲಿಲ್ಲ ಆದರೆ ಇದು ತಾರತಮ್ಯವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಹೀಗಾಗಿ ಜಮ್ಮು- ಕಾಶ್ಮೀರ ಸಂಪೂರ್ಣ ವಿಧಾನಸಭೆಯುಳ್ಳ ರಾಜ್ಯವಾಗುವವರೆಗೆ ನಾನು ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ. ಸ್ಪರ್ಧೆ ಮಾಡಿಲ್ಲದಿದ್ದರೂ ನಾನು ನನ್ನ ಪಕ್ಷ ಕಟ್ಟುವಲ್ಲಿ ಸತತ ನಿರತವಾಗಿರುತ್ತೇನೆ ಎಂದು ತಿಳಿಸಿದ್ದಾರೆ.
ಅಲ್ಲದೆ ಇದು ಬೆದರಿಕೆ ಅಥವಾ ಬ್ಲಾಕ್‌ಮೇಲ್ ಅಲ್ಲ ಎಂದು ಹೇಳಿರುವ ಒಮರ್, ಕೇಂದ್ರಾಡಳಿತ ಪ್ರದೇಶವಾಗಿಸಿರುವುದರಿಂದ ಸದ್ಯ ಜಮ್ಮು-ಕಾಶ್ಮೀರ ನಿರುಪಯುಕ್ತ ವಿಧಾನಸಭೆ ಆಗಿದೆ. ಇಂತಹ ವಿಧಾನಸಭೆ ಮುನ್ನಡೆಸಲು ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ