ನಾನು ಸ್ವಇಚ್ಛೆಯಿಂದ ಸರ್ಕಾರಿ ನಿವಾಸ ಖಾಲಿ ಮಾಡುತ್ತೇನೆ : ಓಮರ್ ಅಬ್ದುಲ್ಲಾ

ಶ್ರೀನಗರ:

     ಹದಿನೆಂಟು ವರ್ಷಗಳ ಹಿಂದೆ ಇಲ್ಲಿ ತಮಗೆ ಒದಗಿಸಿದ್ದ ಸರ್ಕಾರಿ ನಿವಾಸವನ್ನು ಸ್ವ ಇಚ್ಛೆಯಿಂದ ತೆರವುಗೊಳಿಸುವುದಾಗಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ತಿಳಿಸಿದರು.ಈ ಸಂಬಂಧ ಅವರು ಜಮ್ಮು-ಕಾಶ್ಮೀರದ ಆಡಳಿತಕ್ಕೆ ಜುಲೈ ತಿಂಗಳಲ್ಲಿ ಬರೆದಿದ್ದ ಪತ್ರವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    2002ರಲ್ಲಿ ಲೋಕಸಭಾ ಸದಸ್ಯರಾಗಿದ್ದಾಗ ಗುಪ್ಕರ್‌ ಪ್ರದೇಶದಲ್ಲಿ ತಮಗೆ ಸರ್ಕಾರಿ ನಿವಾಸವನ್ನು ನೀಡಲಾಗಿತ್ತು. ಕೇಂದ್ರಾಡಳಿತ ಪ್ರದೇಶದಲ್ಲಿ ನಿಯಮಾವಳಿಗಳು ಬದಲಾಗಿರುವ ಕಾರಣ ಈ ನಿವಾಸವನ್ನು ನಾನು ಖಾಲಿ ಮಾಡಲು ಇಚ್ಛಿಸುತ್ತೇನೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.2009 ರಿಂದ 2015 ವರೆಗೆ ಅವರು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದರು.

     ‘ಶ್ರೀನಗರದಲ್ಲಿರುವ ನನ್ನ ಸರ್ಕಾರಿ ನಿವಾಸವನ್ನು ನಾನು ಅಕ್ಟೋಬರ್‌ ತಿಂಗಳ ಅಂತ್ಯದಲ್ಲಿ ಖಾಲಿ ಮಾಡಲಿದ್ದೇನೆ. ಕಳೆದ ವರ್ಷ ಕೆಲ ಮಾಧ್ಯಮಗಳು ನನಗೆ ಸರ್ಕಾರಿ ನಿವಾಸ ಖಾಲಿ ಮಾಡುವಂತೆ ನೋಟಿಸ್‌ ಜಾರಿ ಮಾಡಲಾಗಿದೆ ಎಂಬ ಸುದ್ದಿಯನ್ನು ಪ್ರಕಟಿಸಿದ್ದರು. ಆದರೆ ಅದು ಸುಳ್ಳು. ನಾನು ನನ್ನ ಸ್ವ ಇಚ್ಛೆಯಿಂದ ಸರ್ಕಾರಿ ನಿವಾಸವನ್ನು ತೊರೆಯುತ್ತಿದ್ದೇನೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link