ಹೈದರಾಬಾದ್:

ಯಾವಾಗಲೂ ಸುದ್ದಿಯಲ್ಲಿರ ಬೇಕು ಎಂದು ಆಸೆ ಪಡುವಂತಹ ಓವೈಸಿ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಪ್ರಸಿದ್ದರು ಈಗ ತಮ್ಮನ್ನು ಸಾಯಿಸಲು ಕೇಂದ್ರ ಹಾಗು ಹಿಂದೂ ಪರ ಸಂಘಟನೆಗಳು ಹೊಂಚು ಹಾಕಿವೆ ಎಂದಿದ್ದ ಅವರು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರಿಗೆ ನಾನು ಯಾವುದೇ ಭದ್ರತೆಯಿಲ್ಲದೇ ಹೋರಬರುತ್ತೇನೆ ಧೈರ್ಯ ಇದ್ದರೆ ನನ್ನನ್ನು ಸಾಯಿಸಿ ಎಂದು ಸವಾಲೆಸೆದಿದ್ದಾರೆ.
ಘಟನೆಯ ವಿವರ:
ರಾಜಾ ಸಿಂಗ್ ಅವರು ಭದ್ರತೆಯನ್ನು ಬದಿಗಿಟ್ಟು ಹೊರಬಂದು ನನ್ನನ್ನೊಂದಿಗೆ 15 ನಿಮಿಷಗಳು ಹೋರಾಡಿ ಎಂದು ಸವಾಲು ಹಾಕಿದ್ದರು.ಹಾಕಿದ ಸವಾಲಿಗೆ ಉತ್ತರವಾಗಿ ಓವೈಸಿ, ಕಳೆದ 25 ವರ್ಷಗಳಿಂದ ನಾನು ಯಾವೊಬ್ಬ ಭದ್ರತಾ ಸಿಬ್ಬಂದಿಯನ್ನು ಸಹ ಹೊಂದಿಲ್ಲ . ಒಬ್ಬೊಂಟಿಯಾಗಿಯೇ ಓಡಾಡುತ್ತಿದ್ದೇನೆ. ನನ್ನಲ್ಲಿರುವ ಹಲವು ಕಾರಣಗಳಿಂದಲೇ ನಾನು ಈಗಾಗಲೇ ಸತ್ತು ಹೋಗಿದ್ದೇನೆ. ಇದೀಗ ನನಗೆ ಯಾವುದೇ ಭಯವಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
