ನವದೆಹಲಿ:
ದೆಹಲಿ ಚಲೋ ಚಳುವಳಿಯ ಅಂತಿಮ ಗುರಿಯಾದ ದೆಹಲಿಯಲ್ಲಿ ಜಾಥಾ ನಿರ್ವಹಿಸುವ ಮೂಲಕ ಪ್ರತಿಭಟನೆ ನಡೆಸಲು ಮುಂದಾದ ರೈತರನ್ನು ತಡೆಯಲು ಯತ್ನಿಸಿದ ಪೊಲೀಸರಿಗೆ ರೈತರು ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
2 ದಿನಗಳ ಕಿಸಾನ್ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಸ್ತಿ ಪಂಜರದ ತಲೆಬುರುಡೆ ಹಿಡಿದು ದೆಹಲಿಗೆ ಬಂದ ತಮಿಳುನಾಡು ಪ್ರಾಂತ್ಯದ ರೈತರು, ಸಂಸತ್ತಿಗೆ ಪ್ರವೇಶಕ್ಕೆ ಅಡ್ಡಿಪಡಿಸಿದ್ದೇ ಆದರೆ ಎಲ್ಲರೂ ಬೆತ್ತಲೆಗೊಂಡು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎಂದು ತಿಳಿಸಿದ್ದಾರೆ.
ನ್ಯಾಷನಲ್ ಸೌತ್ ಇಂಡಿಯನ್ ರಿವರ್ ಇಂಟರ್ಲಿಂಕಿಂಗ್ ಅಗ್ರಿ ಕಲ್ಚರ್ಸ್ ಅಸೋಸಿಯೇಶನ್’ನ ಸುಮಾರು 1,200ಕ್ಕೂ ಹೆಚ್ಚು ಸದಸ್ಯರು ಈಗಾಗಲೇ ದೆಹಲಿ ತಲುಪಿದ್ದು ಪ್ರತಿಭಟನೆಗೆ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿವೆ ಎಂದು ಪಿ.ಅಯ್ಯಕನು ಅವರು ಸುದ್ದದಿಗಾರರಿಗೆ ತಿಳಿಸಿದ್ದಾರೆ.
ಈಗಾಗಲೆ ಪೂರ್ವ ನಿಗದಿಯಾಗಿದ್ದ ಹಾಗೆ ಸಾವಿರಾರು ರೈತರು ದೆಹಲಿಯ ಪ್ರತಿಭಟನಾ ಪ್ರಸಿದ್ದ ರಾಮ್ ಲೀಲಾ ಮೈದಾನದಲ್ಲಿ ಸೇರಿದ್ದಾರೆ,ಇದೇ ಶುಕ್ರವಾರ ಈ ಎಲ್ಲಾ ರೈತರು ಸಂಸತ್ ಭವನಕ್ಕೆ ತೆರಳಿದ್ದಾರೆ. ಪ್ರತಿಭಟನೆ ವೇಳೆ ರೈತರ ಬೆಳೆ ಸಾಲ ಮನ್ನಾ, ಬೆಳೆ ವಿಮೆ ಗೊಂದಲ ಸೇರಿ ವಿವಿಧ ಬೇಡಿಕೆಗಳಿಗೆ ರೈತರು ಆಗ್ರಹಿಸುತ್ತಾರೆಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ