ಪ್ರದರ್ಶನ ಸರಕುಗಳ ಮೇಲಿನ ಐಜಿಎಸ್‌ಟಿ ರದ್ದು..!!

ನವದೆಹಲಿ

     ಭಾರತದಿಂದ ವಸ್ತುಪ್ರದರ್ಶನಕ್ಕಾಗಿ ಅಥವಾ ಇತರ ಉತ್ಪನ್ನ ಪ್ರೋತ್ಸಾಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಒಯ್ಯುವ ವಸ್ತುಗಳ ಮೇಲೆ ಸಂಯೋಜಿತ ಸರಕು ಮತ್ತು ಸೇವಾ ತೆರಿಗೆ (ಇಂಟಿಗ್ರೇಟೆಡ್ ಜಿಎಸ್‌ಟಿ) ವಿಧಿಸಲಾಗುವುದಿಲ್ಲ ಎಂದು ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.

     ವಸ್ತುಪ್ರದರ್ಶನ ಅಥವಾ ಉತ್ಪನ್ನ ಪ್ರೋತ್ಸಾಹಕ್ಕೆಂದು ಸರಕುಗಳನ್ನು ವಿದೇಶಗಳಿಗೆ ಕೊಂಡೊಯ್ಯುವುದರಿಂದ ಅದನ್ನು ಜಿಎಸ್‌ಟಿ ಅಡಿ ಮಾರಾಟ ಎಂದು ಪರಿಗಣಿಸಲಾಗುವುದು, ಆ ಹಂತದಲ್ಲಿ ಅದು ಮಾರಾಟಕ್ಕಿಟ್ಟ ವಸ್ತುವಾಗಿರುತ್ತದೆಯೇ ಹೊರತು ಅದರ ಖರೀದಿಯಾಗಿರುವುದಿಲ್ಲ ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಅಬಕಾರಿ ಸುಂಕ ಮಂಡಳಿ (ಸಿಬಿಐಸಿ) ನೀಡಿರುವ ಹೇಳಿಕೆ ತಿಳಿಸಿದೆ.

      ರತ್ನಾಭರಣ ಸೇರಿದಂತೆ ಅನೇಕ ವಸ್ತುಗಳನ್ನು ಪ್ರದರ್ಶನಕ್ಕಾಗಿ ವಿದೇಶಗಳಿಗೆ ಕೊಂಡೊಯ್ದು ವಾಪಸ್ ಆಮದಾಗುವಾಗ ಐಜಿಎಸ್‌ಟಿ ವಿಧಿಸಲಾಗುತ್ತಿತ್ತು. ಇದಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಕೈಗಾರಿಕೆಗಳು ಮತ್ತು ವ್ಯಾಪಾರ ಸಂಘಟನೆಗಳು ಹಣಕಾಸು ಸಚಿವಾಲಯವನ್ನು ಕೋರಿದ್ದವು.

       ಸಿಜಿಎಸ್‌ಟಿ ನಿಯಮ 55 ರ ಅನ್ವಯ ಭಾರತದಿಂದ ಹೊರಹೋಗುವ ವಸ್ತುಗಳಿಗೆ ಡೆಲಿವರಿ ಚಲನ್ ನೀಡಬೇಕಿದೆ. ಏಕೆಂದರೆ ಆ ವಸ್ತುಗಳು ಮಾರಾಟ ಅಲ್ಲದ ಕಾರಣ ಅವು ಜೀರೋ ರೇಟೆಡ್ ಸಪ್ಲೈ ಅಡಿ ಬರಲಿದ್ದು ಐಜಿಎಸ್‌ಟಿ ಕಾಯ್ದೆಯ ನಿಯಮ 16 ರ ಅಡಿಯಲ್ಲಿ ಅಗತ್ಯವಿರುವಂತೆ ಬಾಂಡ್ ಅಥವಾ ಎಲ್‌ಯುಟಿ (ಲೆಟರ್ ಆಫ್ ಅಂಡರ್‌ಟೇಕಿಂಗ್) ಅಗತ್ಯವಿರುವುದಿಲ್ಲ ಎಂದು ಸಿಬಿಐಸಿ ತಿಳಿಸಿದೆ.

       ಅಲ್ಲದೇ ಈ ಸರಕುಗಳನ್ನು ಆರು ತಿಂಗಳೊಳಗೆ ಮಾರಾಟ ಮಾಡಬೇಕಿದೆ ಅಥವಾ ಭಾರತಕ್ಕೆ ವಾಪಸ್ ತರಬೇಕಿದೆ ಎಂದು ಸಿಬಿಐಸಿ ಸ್ಪಷ್ಟನೆ ನೀಡಿದೆ. ಆರು ತಿಂಗಳ ಗಡುವಿನೊಳಗೆ ಈ ಸರಕುಗಳನ್ನು ಮಾರಾಟ ಮಾಡದೇ ಇದ್ದಲ್ಲಿ ಅಥವಾ ವಾಪಸ್ ಭಾರತಕ್ಕೆ ತರದೇ ಇದ್ದಲ್ಲಿ ಅಂತಹ ಸರಕುಗಳು ಮಾರಟವಾಗಿವೆ ಎಂದೇ ಪರಿಗಣಿಸಲಾಗುವುದು. ಆ ಸರಕು ಕಳುಹಿಸಿದವರು ಆ ಗಡುವಿನ ನಂತರದ ದಿನಾಂಕಕ್ಕೆ ಅದರ ಬಿಲ್ ನೀಡಬೇಕಿದೆ. ಅಂತಹ ಉತ್ಪನ್ನಗಳಿಗೆ  ರೇಟಿಂಗ್, ರೀಫಂಡ್ ಮೊದಲಾದ ಲಾಭಗಳು ದೊರೆಯುವುದಿಲ್ಲ ಎಂದು ಸಿಬಿಐಸಿ ತಿಳಿಸಿದೆ.

       ಈ ಸರಕುಗಳು ಆರು ತಿಂಗಳೊಳಗಾಗಿ ಪೂರ್ಣವಾಗಿ ಮಾರಾಟವಾದಲ್ಲಿ ಅಥವಾ ಭಾಗಶಃ ಮಾರಾಟವಾದಲ್ಲಿ ಆ ಸರಕುಗಳನ್ನು ರವಾನಿಸಿದವರು ಆ ದಿನಾಂಕದಂದು ಮಾರಾಟ ಪ್ರಮಾಣದಷ್ಟು ಬಿಲ್ ನೀಡಬೇಕಿದೆ.

      ಬಿಲ್ ನೀಡಿದ ದಿನಾಂಕದಂದು ಅಂತಹ ಮಾರಾಟಗಳನ್ನು ರೇಟೆಡ್ ಎಂದು ಪರಿಗಣಿಸಲಾಗುವುದು. ಆದಾಗ್ಯೂ ತತ್‌ ಸಂಬಂಧದ ರೀಫಂಡ್ (ಹಣ ವಾಪಸಾತಿ) ಬಾಕಿ ಇರುವ ಐಟಿಸಿ (ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ) ಹೊರತು ಐಜಿಎಸ್‌ಟಿ ರೀಫಂಡ್ ಅಲ್ಲ.

        ಆರು ತಿಂಗಳೊಳಗಾಗಿ ಸರಕುಗಳನ್ನು ವಾಪಸ್ ತಂದಿದ್ದೇ ಆದಲ್ಲಿ ಯಾವುದೇ ಬಿಲ್ (ಟ್ಯಾಕ್ಸ್ ಇನ್ವಾಯ್ಸ್‌) ನೀಡುವ ಅಗತ್ಯವಿಲ್ಲ ಎಂದೂ ಸಹ ಸಿಬಿಐಸಿ ಸ್ಪಷ್ಟಪಡಿಸಿದೆ. ರತ್ನಾಭರಣಗಳ ವಲಯ ಈ ನಿರ್ಧಾರವನ್ನು ಸ್ವಾಗತಿಸಿದೆ. ಈ ನಡೆ ರಫ್ತುದಾರರಿಗೆ ತುಸು ನಿರಾಳ ಒದಗಿಸಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap