ಚೀನಾದಿಂದ ದುಬಾರಿ ಬೆಲೆಗೆ RAPID ANTIBODY TEST ಕಿಟ್ ಖರೀಧಿಸಿದ ಭಾರತ..!

ನವದೆಹಲಿ:

   ಕೊರೋನಾವೈರಸ್ ನಿಯಂತ್ರಣಕ್ಕಾಗಿ ಭಾರತ ದುಬಾರಿ ಬೆಲೆ ನೀಡಿ ಚೀನಾದ ಕ್ಷಿಪ್ರ ಅಂಟಿಬಾಡಿ ಟೆಸ್ಟ್ ಕಿಟ್ ಗಳನ್ನು ಖರೀದಿಸಿರುವುದು ತಿಳಿದುಬಂದಿದೆ.ಆದರೆ,ದೋಷಪೂರಿತ ಫಲಿತಾಂಶದಿಂದಾಗಿ ಅನೇಕ ರಾಜ್ಯಗಳಲ್ಲಿ ಅವುಗಳನ್ನು   ಬಳಸದೆ ಹಾಗೆಯೇ ಇಡಲಾಗಿದೆ.

   ಭಾರತೀಯ ವಿತರಕ ಸಂಸ್ಥೆ ರಿಯಲ್ ಮೆಟಬಾಲಿಕ್ಸ್  ಮೂಲಕ ದುಬಾರಿ ಬೆಲೆಗೆ ಚೀನಾದ ಪರೀಕ್ಷಾ ಕಿಟ್ ಗಳನ್ನು ಭಾರತ ಸರ್ಕಾರಕ್ಕೆ ಮಾರಾಟ ಮಾಡಿದೆ.ದೆಹಲಿ ಹೈಕೋರ್ಟ್ ಮೆಟ್ಟಿಲೇರಿರುವ ಆಮದುದಾರರು ಮತ್ತು ವಿತರಕರ ನಡುವಿನ ಕಾನೂನು ವಿವಾದದಿಂದ ಇದು ತಿಳಿದುಬಂದಿದೆ. 

    ಚೀನಾದ ವೊಡ್ಫೊ ಸಂಸ್ಥೆಯಿಂದ  ಐದು ಲಕ್ಷ ಕ್ಷಿಪ್ರ ಅಂಟಿಬಾಡಿ ಟೆಸ್ಟ್ ಕಿಟ್ ಗಳನ್ನು ಖರೀದಿಸಲು ಭಾರತ ಮಾರ್ಚ್ 27 ರಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮೂಲಕ ಆರ್ಡರ್ ಮಾಡಿತ್ತು. ಐಸಿಎಂಆರ್ ಮತ್ತು ಅರ್ಕ್ ಫಾರ್ಮಸ್ಪೂಟಿಕಲ್ಸ್ , ನಡುವೆ ಸಹಿ ಒಪ್ಪಂದ ನಡೆದಿತ್ತು.ಕ್ಷಿಪ್ರ ಅಂಟಿಬಾಡಿ ಟೆಸ್ಟ್ ಗಳನ್ನೊಳಗೊಂಡಂತೆ 650, 000 ಕಿಟ್ ಗಳನ್ನು ಭಾರತಕ್ಕೆ ಪೂರೈಸಲಾಗುತ್ತಿದೆ ಎಂದು ಏಪ್ರಿಲ್ 16 ರಂದು ಚೀನಾದ ಭಾರತೀಯ ರಾಯಭಾರಿ ವಿಕ್ರಮ್ ಮಿಶ್ರಿ ಟ್ವೀಟ್ ಮಾಡಿದ್ದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap