(INDIA = HEAVEN) ಭಾರತ ಸ್ವರ್ಗಕ್ಕೆ ಸಮ : ಪಿ ಚಿದಂಬರಂ

ನವದೆಹಲಿ:

 ರಾಷ್ಟ್ರ ಮಟ್ಟದಲ್ಲಿ ತೀವ್ರ ಕುತೂಹಲ ಕೆರಳಿಸಿದ ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಗೆದ್ದ ನಂತರ ದೇಶದ ರಾಜಕಾರಣದಲ್ಲಿ ನೈತಿಕತೆ ಇನ್ನೂ ಜೀವಂತವಾಗಿದೆಯೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ ಎಂದು ಚಿದಂಬರಂ ಹೇಳಿದ್ದಾರೆ.

 ರಾಷ್ಟ್ರಮಟ್ಟದಲ್ಲಿ ಕುತೂಹಲ ಮೂಡಿಸಿದ್ದ ರಾಜ್ಯದ ಉಪಚುನಾವಣೆಯಲ್ಲಿ ಕಾಂಗ್ರೆಸ್​-ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದವರಲ್ಲಿ ಇಬ್ಬರನ್ನು ಹೊರತು ಪಡಿಸಿ ಉಳಿದವರೆಲ್ಲ ಗೆದ್ದಿದ್ದಾರೆ. ಅನರ್ಹರಾಗಿದ್ದ ಶಾಸಕರೆಲ್ಲರೂ ಹೀನಾಯವಾಗಿ ಸೋಲು ಕಾಣುತ್ತಾರೆ ಎಂದೆಣಿಸಿದ್ದ ಕಾಂಗ್ರೆಸ್​ ಲೆಕ್ಕಾಚಾರ ಪೂರ್ತಿ ಉಲ್ಟಾ ಹೊಡೆದಿದೆ ಹಿಂಬಾಗಿಲಿನಿಂದ ಸರ್ಕಾರ ಮಾಡಿದ್ದವರು ಇಂದು ಸೇಫ್ ಆಗಿದ್ದಾರೆ.

  ಕರ್ನಾಟಕದಲ್ಲಿ ಆಡಳಿತಾರೂಢ ಪಕ್ಷ 12 ಕ್ಷೇತ್ರಗಳನ್ನು ಗೆದ್ದು, ಕಾಂಗ್ರೆಸ್ ಹೀನಾಯವಾಗಿ ಸೋತಿದ್ದರ ಬಗ್ಗೆ ಪಿ.ಚಿದಂಬರಂ ಮಾತನಾಡಿ ಭಾರತ ಇಂದು ಕೋಮುವಾದ ಮತ್ತು ಭ್ರಷ್ಟರ ಸ್ವರ್ಗವಾಗಿದೆ ಎಂದು ಕಿಡಿಕಾರಿದ್ದಾರೆ.

   ‘ಓರ್ವ ಅಭ್ಯರ್ಥಿ ಕಾಂಗ್ರೆಸ್​ನಲ್ಲಿದ್ದಾಗ ಮತದಾರರು ಅವನಿಗೆ ಮತ ಹಾಕಿ ಗೆಲ್ಲಿಸುತ್ತಾರೆ. ಅದೇ ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯಲು ಬಿಜೆಪಿಗೆ ಪಕ್ಷಾಂತರಗೊಂಡು ಸ್ಪರ್ಧಿಸಿದರೆ ಆಗಲೂ ಮತದಾರರು ಅವನನ್ನೇ ಗೆಲ್ಲಿಸುತ್ತಾರೆ. ಹೀಗಿರುವಾಗ ಭಾರತದ ರಾಜಕಾರಣ ಒಂದು ಅತ್ಯುತ್ಕೃಷ್ಟತೆಯನ್ನು ಹೊಂದಿದೆ ಹಾಗೂ ಅದು ನಿರಾಕಾರವಾಗಿದೆ ಎಂದು ಹೇಳಬಹುದಲ್ಲವೇ? ಇದೇ ಕಾರಣಕ್ಕೇ ನಾನು ಭಾರತವನ್ನು ಸ್ವರ್ಗಕ್ಕೆ(India=Heaven) ಸಮ ಎಂದು ಟ್ವೀಟ್​ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap