ಭಾರತೀಯ ಯೋಧರ ಬಂಧನ : ಚೀನಾ ಮತ್ತು ವರದಿ ತಳ್ಳಿಹಾಕಿದ ಭಾರತೀಯ ಸೇನೆ

ನವದೆಹಲಿ:

      ಅತಿ ಎತ್ತರದ ಯುದ್ಧಭೂಮಿಗಳಲ್ಲಿ ಒಂದಾ ಲಡಾಖ್ ನಲ್ಲಿ ಭಾರತ ಹಾಗೂ ಚೀನಾ ನಡುವೆ ಸಂಘರ್ಷ ತಾರಕಕ್ಕೇರಿರುವ ನಡುವಲ್ಲೇ ಭಾರತೀಯ ಯೋಧರನ್ನು ಚೀನಾ ಪಡೆಗಳು ಕಳೆದ ವಾರ ಬಂಧನಕ್ಕೊಳಪಡಿಸಿತ್ತು ಎಂಬ ವರದಿಯನ್ನು ಭಾರತೀಯ ಸೇನಾಪಡೆ ತಳ್ಳಿಹಾಕಿದೆ. 

     ಲಡಾಖ್’ನ ಪ್ಯಾಂಗ್ಯಾಂಗ್ ಸರೋವರದ ಬಳಿ ಹಲವು ದಿನಗಳಿಂದ ಬೀಡು ಬಿಟ್ಟಿರುವ ಚೀನಾ ಸೇನೆ, ಕಳೆದ ಬುಧವಾರ ಭಾರತದ ಗಡಿಯೊಳಗೆ ನುಗ್ಗಿ ಭಾರತದ ನೆಲದಲ್ಲಿ ಓಡಾಟ ನಡೆಸಿತ್ತು. ಈ ವೇಳೆ ಭಾರತೀಯ ಯೋಧರು ಆಕ್ಷೇಪ ವ್ಯಕ್ತಪಡಿಸಿದಾಗ ಹೆಚ್ಚಿನ ಸಂಖ್ಯೆಯಲ್ಲಿದ್ದ ಚೀನಾ ಯೋಧರು ಭಾರತೀಯ ಯೋಧರನ್ನು ತಮ್ಮ ವಶಕ್ಕೆ ಪಡೆದಿದ್ದೂ ಅಲ್ಲದೆ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಬಳಿಕ ಮರಳಿಸಿದ್ದರು.

      ಈ ವಿಚಾರ ಕೈಮೀರುವ ಹಂತಕ್ಕೆ ತಲುಪುತ್ತಲೇ ಉಭಯ ದೇಶಗಳ ಕಮಾಂಡರ್ ಗಳು ಮಾತುಕತೆ ನಡೆಸಿ, ಪರಿಸ್ಥಿತಿ ತಿಳಿಗೊಳಿಸಿ, ಬಳಿಕ ಭಾರತೀಯ ಯೋಧರನ್ನು ಬಿಡುಗಡೆ ಮಾಡಲಾಗಿತ್ತು ಎಂದು ವರದಿಗಳಾಗಿದ್ದವು. ಈ ವರದಿಯನ್ನು ಇದೀಗ ಭಾರತೀಯ ಸೇನಾಪಡೆ ತಿರಸ್ಕರಿಸಿದೆ. ಚೀನಾ ಪಡೆಗಳಿಂದ ಯಾವುದೇ ಭಾರತೀಯ ಯೋಧರೂ ಬಂಧನಕ್ಕೊಳಪಟ್ಟಿರಲಿಲ್ಲ ಎಂದು ಸ್ಪಷ್ಟಪಡಿಸಿದೆ. 

    ಈ ನಡುವೆ ವಿದೇಶಾಂಗ ಸಚಿವಾಲಯ ಕೂಡ ಹೇಳಿಕೆ ನೀಡಿದ್ದು, ಪಾಶ್ಚಿಮಾತ್ಯ ವಲಯ ಅಥವಾ ಸಿಕ್ಕಿಂ ವಲಯದಲ್ಲಿ ಎಲ್ಎಸಿ ಉದ್ದಕ್ಕೂ ಭಾರತೀಯ ಸೇನೆ ಕಾರ್ಯಚಟುವಟಿಕೆ ನಡೆಸುತ್ತಿವೆ ಎಂಬ ಹೇಳಿಕೆಗಳು ನಿಖರವಾಗಿಲ್ಲ. ಭಾರತೀಯ ಹಾಗೂ ಚೀನಾ ಗಡಿ ಪ್ರದೇಶಗಳಲ್ಲಿ ವಾಸ್ತವಿಕ ನಿಯಂತ್ರಣ ರೇಖೆ ಕುರಿತ ನಿಯಮಗಳಿಗೆ ಭಾರತೀಯ ಸೇನಾಪಡೆ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap