ನವದೆಹಲಿ:
ಶುಕ್ರವಾರ ಬಿಡುಗಡೆಯಾದ ಜಿಡಿಪಿ ಸೂಚಂಕಜವು ದೇಶಿ ಅರ್ಥ ಶಾತ್ರಜ್ಞರನ್ನು ತೀವ್ರ ಆತಂಕಕ್ಕೆ ಗುರಿಮಾಡಿದೆ ಪ್ರಸಕ್ತ ಸಾಲಿನ ಎರಡನೇ ತ್ರೈ ಮಾಸಿಕ ಅವಧಿಯಲ್ಲಿ ಜಿಡಿಪಿ ಶೇ. 4.5 ಕ್ಕೆ ಕುಸಿದಿದ್ದು,ಸುಧಾರಣೆಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರ್ಥಿಕ ತಜ್ಞ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಮೊದಲ ತ್ರೈಮಾಸಿಕದಲ್ಲಿ ಶೇ. 5 ರಷ್ಟಿದ್ದ ಜಿಡಿಪಿ ಎರಡನೇ ತ್ರೈಮಾಸಿಕದಲ್ಲಿ ಶೇ 4.5 ಕ್ಕೆ ಕುಸಿದಿರುವುದು ಆರ್ಥಿಕತೆ ಸಂಪೂರ್ಣ ಕುಸಿಯುವ ಆತಂಕ ಉಂಟು ಮಾಡಿದೆ ಮತ್ತು ದೇಶದ ಪ್ರಸ್ತುತ ಆರ್ಥಿಕತೆ ಡೋಲಾಯಮಾನವಾಗಿದೆ ಎಂದು ಮಾಜಿ ಪ್ರಧಾನಿ ಹೇಳಿದ್ದಾರೆ.’ನಮ್ಮ ಆರ್ಥಿಕತೆಯ ಸ್ಥಿತಿ ಚಿಂತಾಜನಕವಾಗಿದೆ ಮತ್ತು ನಮ್ಮ ಸಮಾಜದ ಸ್ಥಿತಿ ಇನ್ನಷ್ಟು ಆತಂಕಕಾರಿಯಾಗಿದೆ ‘ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೇವಲ ಆರ್ಥಿಕ ನೀತಿಗಳಲ್ಲಿನ ಬದಲಾವಣೆಗಳಿಂದ ಆರ್ಥಿಕತೆಯ ಪುನರುಜ್ಜೀವನ ಸಾಧ್ಯವಿಲ್ಲ. ನಮ್ಮ ಆರ್ಥಿಕತೆಯು ವಾರ್ಷಿಕ ಶೇ. 8 ಕ್ಕೆ ಬೆಳೆಯಲು ಪ್ರಾರಂಭಿಸಲು ನಾವು ನಮ್ಮ ಸಮಾಜದಲ್ಲಿರುವ ಭಯದ ವಾತಾವರಣವನ್ನು ವಿಶ್ವಾಸಕ್ಕೆ ಬದಲಾಯಿಸಬೇಕಾಗಿದೆ. ಆರ್ಥಿಕತೆಯ ಸ್ಥಿತಿ ಅದರ ಸಮಾಜದ ಸ್ಥಿತಿಯ ಪ್ರತಿಬಿಂಬವಾಗಿದೆ.ದೇಶದಲ್ಲಿ ಜನರಲ್ಲಿ ಆರ್ಥಿಕ ಕುಸಿತದಿಂದ ಸಾಮಾಜಿಕ ನಂಬಿಕೆ ಮತ್ತು ಅದರ ಮೇಲಿನ ವಿಶ್ವಾಸ ಸಂಪೂರ್ಣ ಛಿದ್ರಗೊಂಡಿದೆ ಎಂದು ಮನಮೋಹನ್ ಸಿಂಗ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
