ಭಾರತ ಜಿಡಿಪಿ ಸೂಚಂಕವನ್ನು 5.6ಕ್ಕೆ ಇಳಿಸಿದ ಮೂಡಿಸ್..!

ನವದೆಹಲಿ :

       ಪ್ರಧಾನಿಯವರ 5 ಟ್ರಲಿಯನ್ ಆರ್ಥಿಕತೆಯ ಕನಸು ಬರೀ ಕನಸಷ್ಟೆ ಎಂಬ ಆರ್ಥಿಕ ತಜ್ಞರ ವಾದಕ್ಕೆ ಇಂಬು ಕೊಡುವಂತೆ ಮೂಡಿಸ್ ಭಾರತದ ಕ್ರೆಡಿಟ್ ರೇಟಿಂಗ್ ಅನ್ನು ಇಳಿಸಿದೆ.

      ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್ ಗುರುವಾರ ಹೇಳಿರುವ ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಗತಿಯು ಶೇಕಡಾ 5.6 ಕ್ಕೆ ಇಳಿದಿದೆ ಎಂದು ತಿಳಿಸಿದೆ, ದೇಶದಲ್ಲಿ ಜಿಡಿಪಿ ಕುಸಿತವು ಈ ಹಿಂದೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕಾಲ ಉಳಿಯುತ್ತದೆ ಎಂದು ಹೇಳಿದರು. ಕ್ರೆಡಿಟ್ ರೇಟಿಂಗ್ಸ್ ಮೇಜರ್ ಭಾರತದ ರೇಟಿಂಗ್‌ಗಳ ದೃಷ್ಟಿಕೋನವನ್ನು “ಸ್ಥಿರ” ದಿಂದ “ಋಣಾತ್ಮಕ” ಕ್ಕೆ ಬದಲಾಯಿಸಿದ್ದಾರೆ. ಭಾರತದ ಆರ್ಥಿಕತೆಯು 2019-20ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 5 ರಷ್ಟು ವಿಸ್ತರಿಸಿದರು ಇದು ಆರು ವರ್ಷಗಳಲ್ಲಿಯೇ ಅತ್ಯಂತ ನಿಧಾನವಾದ ಬೆಳವಣಿಗೆ ಎಂದು ಗುರುತಿಸಿದೆ.   

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ