ಪಾಕಿಸ್ತಾನ
ಪಾಕಿಸ್ತಾನಿ ಉಗ್ರರ ಹಿನ್ನೆಲೆಯಲ್ಲಿ ಟೊಮೆಟೊ ರಫ್ತನ್ನು ರದ್ದುಗೊಳಿಸಿದ ಭಾರತ ಇದೀಗ ಪಾಕಿಸ್ತಾನಕ್ಕೆ ಮತ್ತೊಂದು ಆರ್ಥಿಕ ಆಘಾತ ನೀಡಿದೆ.
ಸದ್ಯ ಭಾರತೀಯ ರೈತರ ಹೊಡೆತಕ್ಕೆ ತತ್ತರಿಸಿರುವ ಪಾಕಿಸ್ತಾನದಲ್ಲಿ ಟೊಮೆಟೊ ದರ ಇದೀಗ ಕೆ.ಜಿಗೆ 180 ರೂ.ಗಳ ಗಡಿ ದಾಟಿದ್ದು, ಇದನ್ನು ಪಾಕಿಸ್ತಾನದ ವಿರುದ್ದದ ಟೊಮೆಟೊ ಯುದ್ಧ ಎಂದೇ ಬಣ್ಣಿಸಲಾಗಿದೆ.
ಭಾರತ ಕ್ರಮೇಣವಾಗಿ ಪಾಕಿಸ್ತಾನದ ಜೊತೆಯಲ್ಲಿದ್ದ ವಾಣಿಜ್ಯ ಮತ್ತು ವ್ಯವಹಾರ ಸಂಬಂಧ ಕಡಿದುಕೊಂಡಿದ್ದು, ಇದರ ಪರಿಣಾಮ ಈಗಾಗಲೇ ಪಾಕಿಸ್ತಾನಕ್ಕೆ ತಟ್ಟಲು ಆರಂಭಿಸಿದೆ. ಪಾಕಿಸ್ತಾನದಲ್ಲಿ ಹಲವು ದಿನ ಬಳಕೆಯ ವಸ್ತುಗಳ ದರ ಗಣನೀಯವಾಗಿ ಏರಿಕೆಯಾಗುತ್ತಿದೆ.
ಪಾಕ್ ನಿಂದ ಸಿಮೆಂಟ್ ಬೇಕಿಲ್ಲ:
ಇಂದು ಪಾಪಿ ಪಾಕ್ ಗೆ ಇಂದು ಆರ್ಥಿಕವಾಗಿ ಬಿದ್ದಿರುವ ಹೊಡೆತ ತಟ್ಟುಕೊಳ್ಳಲು ಇನ್ನೂ ಸುಮಾರು ದಿನಗಳೆ ಬೇಕಾಗಬಹುದು ಅದೇನೆಂದರೆ ಭಾರತೀಯ ವರ್ತಕರು ಪಾಕಿಸ್ತಾನದಿಂದ ಇಷ್ಟುದಿನ ಆಮದು ಮಾಡುತ್ತಿದ್ದ ಸಿಮೆಂಟ್ ಅನ್ನು ಸ್ಥಗಿತಗೊಳಿಸುವ ಮೂಲಕ ಪಾಕ್ ಗೆ ಮುಟ್ಟಿನೋಡಿಕೊಳ್ಳುವ ಹಾಗೆ ಮಾಡಿದ್ದಾರೆ.ಪಾಕಿಸ್ತಾನ ದಿನವೊಂದಕ್ಕೆ ಸುಮಾರು 600-800 ಕಂಟೈನರ್‌ಗಳಷ್ಟು ಸಿಮೆಂಟ್ ಅನ್ನು ಭಾರತಕ್ಕೆ ರಫ್ತು ಮಾಡುತ್ತಿತ್ತು. ಇದೀಗ ಸಿಮೆಂಟ್ ಹೊತ್ತ ಹಡಗುಗಳು ಕರಾಚಿ ಬಂದರಿನಲ್ಲೇ ಉಳಿದಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
