ಭಾರತದ ನಡೆ ತೀವ್ರ ಕಳವಳ ಹುಟ್ಟಿಸಿದೆ : ಚೀನಾ

ನವದೆಹಲಿ:

     ಟಿಕ್‌ಟಾಕ್ ಮತ್ತು ವೀಚಾಟ್ ಸೇರಿದಂತೆ 59 ಚೀನಾದ ಆ್ಯಪ್‌ಗಳ ಮೇಲೆ ಭಾರತ ಸರ್ಕಾರ ನಿರ್ಬಂಧ ವಿಧಿಸಿದ ಮೆಲೆ ತನ್ನ ಆರ್ಥಿಕ ಬೆಳವಣಿಗೆಗೆ ಹೊಡೆತ ಎಲ್ಲಿ ಬೀಳುವುದೋ ಎಂದು ಕಳವಳಗೊಂಡಿರುವ ಚೀನಾ ನಾವು ಸದ್ಯದ ಪರಿಸ್ಥಿತಿಯನ್ನು “ಪರಿಶೀಲಿಸುತ್ತಿದೆವೆ  ಎಂದು ಹೇಳಿದೆ.

    ಚೀನಾ ಭಾರತದ ನಿರ್ಧಾರವನ್ನು ಬಲವಾಗಿ ಖಂಡಿಸುತ್ತದೆ ಮತ್ತು ಇದು ಒಂದು ದೇಶದ ವಿರುದ್ಧ ತೆಗೆದುಕೊಂಡಿರುವ ದ್ವೇಶದ ನಡೆಯಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿಜಿಯಾನ್ ತಿಳಿಸಿದ್ದಾರೆ.ಚೀನಾ ಮೂಲದ ಆ್ಯಪ್ ಗಳ ಮೇಲಿನ  ಬ್ಯಾನ್  ಹಿಂಪಡೆಯುವ ಮೂಲಕ ಚೀನಾ  ವ್ಯವಹಾರಗಳ ಹಕ್ಕುಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಭಾರತಕ್ಕೆ ಇದೆ ಎಂದು ಅವರು ದೈನಂದಿನ ಬ್ರೀಫಿಂಗ್ ಸಮಯದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

    ಈ ಅಪ್ಲಿಕೇಶನ್‌ಗಳು “ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಪೂರ್ವಾಗ್ರಹ ಪೀಡಿತವಾಗಿವೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ” ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. ಗೂಗಲ್ ಮತ್ತು ಆಪಲ್ ಈ ಅಪ್ಲಿಕೇಶನ್‌ಗಳನ್ನು ಪ್ಲೇಸ್ಟೋರ್ ಮತ್ತು ಆಪ್ ಸ್ಟೋರ್‌ನಿಂದ ತೆಗೆದುಹಾಕಿದೆ.ಸರ್ಕಾರಿ ಸಮಿತಿಯ ಮುಂದೆ ಸ್ಪಷ್ಟೀಕರಣಗಳನ್ನು ನೀಡಲು ಕಂಪನಿಗಳನ್ನು ಆಹ್ವಾನಿಸಲಾಗಿದೆ, ಇದು ನಿಷೇಧವನ್ನು ತೆಗೆದುಹಾಕಬಹುದೇ ಅಥವಾ ಉಳಿಯುತ್ತದೆಯೇ ಎಂದು ನಿರ್ಧರಿಸುತ್ತದೆ.

    ಈ ಮಧ್ಯೆ ತನ್ನ 59 ಚೀನಾ ಆ್ಯಪ್‌ಗಳನ್ನು ನಿಷೇಧಿಸಿರುವ ಭಾರತದ ನಡೆಯನ್ನು ತೀವ್ರ ಕಳವಳಕಾರಿ ಎಂದು ಕರೆದಿರುವ ಚೀನಾ, ಇಂತಹ ಆಕ್ರಮಣಕಾರಿ ನೀತಿಗಳಿಂದ ಸಮಸ್ಯೆ ಮತ್ತಷ್ಟು ಕಗ್ಗಂಟಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.ಈ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್, ಭಾರತದ ನಡೆಯನ್ನು ದುರದೃಷ್ಟಕರ ಎಂದು ಬಣ್ಣಿಸಿದರು.

    ಅಂತರರಾಷ್ಟ್ರೀಯ ಮತ್ತು ಸ್ಥಳೀಯ ಕಾನೂನು-ನಿಬಂಧನೆಗಳನ್ನು ಪಾಲಿಸುವಂತೆ ಚೀನಿ ಕಂಪನಿಗಳಿಗೆ ನಾವು ಯಾವಾಗಲೂ ಸ್ಪಷ್ಟ ಸೂಚನೆಯನ್ನು ನೀಡಿರುತ್ತೇವೆ. ಯಾವುದೇ ಕಾರಣಕ್ಕೂ ಸ್ಥಳೀಯ ಕಾನೂನನ್ನು ಅಗೌರವಿಸುವ ಪ್ರಶ್ನೆಯೇ ಇಲ್ಲ ಎಂದು ಲಿಜಿಯಾನ್ ಹೇಳಿದರು.ಅದರಂತೆ ಚೀನಾವೂ ಸೇರಿದಂತೆ ಅಂತಾರಾಷ್ಟ್ರೀಯ ಹೂಡಿಕೆದಾರರ ಕಾನೂನಾತ್ನಕ ಹಕ್ಕುಗಳನ್ನು ಎತ್ತಿ ಹಿಡಿಯುವ ಜವಾಬ್ದಾರಿ ಭಾರತದ ಮೇಲಿದ್ದು, ಈಗ ಕೈಗೊಂಡಿರುವ 59 ಚೀನಾ ಆ್ಯಪ್‌ಗಳ ಮೇಲಿನ ನಿಷೇಧದ ತೀರ್ಮಾನವನ್ನು ಭಾರತ ಮರುಪರಿಶೀಲಿಸಲಿದೆ ಎಂದು ಲಿಜಿಯಾನ್ ಭರವಸೆ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap