ಭಾರತದ ಹಿರಿಯ ಕ್ರಿಕೆಟಿಗ ನಿಧನ..!

ಮುಂಬೈ:

    ಭಾರತದ ಮಾಜಿ ಕ್ರಿಕೆಟಿಗ ಶ್ರೀ ಮಾಧವ್ ಆಪ್ಟೆ ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.

   ಮಾಧವ್ ಆಪ್ಟೆ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಪುತ್ರ ವಾಮನ್ ಆಪ್ಟೆ ತಿಳಿಸಿದ್ದಾರೆ.ಮಾಧವ್ ಆಪ್ಟೆ ಅವರು 1950ರಲ್ಲಿ 7 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರು. ಒಂದು ಶತಕ, ಮೂರು ಅರ್ಧಶತಕದೊಂದಿಗೆ 542 ರನ್ ಗಳನ್ನು  ಹೊಂದಿದ್ದಾರೆ.  ಅಜೇಯ 163 ರನ್ ಅವರ ಅತ್ಯಧಿಕ ವಯಕ್ತಿಕ ಸ್ಕೋರ್ ಆಗಿತ್ತು . 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap