ಕೈಗಾರಿಕಾ ಉತ್ಪಾದನೆ ಶೇಕಡಾ 1.1ರಷ್ಟು ಕುಸಿತ..!

ನವದೆಹಲಿ :

  ದೇಶದಲ್ಲಿ ಉತ್ಪಾದನೆ,ಕ್ಷೇತ್ರ , ವಿದ್ಯುತ್ ಉತ್ಪಾದನೆ ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ ದಾಖಲಾಗುತ್ತಿರುವ ಕಳಪೆ ಸಾಧನೆಯಿಂದಾಗಿ ಈ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ದೇಶದ ಒಟ್ಟು ಕೈಗಾರಿಕಾ ಉತ್ಪಾದನೆಯು ಶೇಕಡಾ 1.1 ರಷ್ಟು ಕುಸಿತ ಕಂಡಿದ್ದು ಇದು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪಾದನಾ ಸಾಮರ್ಥ್ಯದ ಮೇಲೆ ಪ್ರಭಾವ ಬೀರುವ ಎಲ್ಲಾ ಲಕ್ಷಣಗಳೂ ಕಾನಿಸುತ್ತಿವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ .   

  ಕೈಗಾರಿಕಾ ಉತ್ಪಾದನಾ ಸೂಚ್ಯಂಕವು ಆಗಸ್ಟ್ 2018 ರಲ್ಲಿ ಶೇಕಡಾ 4.8ರಷ್ಟಿದೆ ಎಂದು ಅಧಿಕೃತ ಅಂಕಿ ಅಂಶಗಳಿಂದ ತಿಳಿದುಬಂದಿದೆ .ಐಐಪಿಗೆ ಶೇಕಡಾ 77 ಕ್ಕಿಂತ ಹೆಚ್ಚಿನ ಕೊಡುಗೆ ನೀಡುವ ಉತ್ಪಾದನಾ ವಲಯವು ಆಗಸ್ಟ್ 2019 ರಲ್ಲಿ ಉತ್ಪಾದನೆಯಲ್ಲಿ ಶೇಕಡಾ 1.2 ರಷ್ಟು ಕುಸಿತ ಕಂಡಿದೆ.ಕಳೆದ ವರ್ಷ ಇದೇ ತಿಂಗಳಲ್ಲಿ ಇದು 5.2 ಶೇಕಡಾ ಬೆಳವಣಿಗೆ ಸಾಧಿಸಿತ್ತು ಎಂದು ವರದಿಯಿಂದ ತಿಳಿದು ಬಂದಿದೆ. 

   ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಒಟ್ಟಾರೆ ಐಐಪಿ ಬೆಳವಣಿಗೆಯು ಶೇಕಡಾ 2.4 ರಷ್ಟಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಇದು 5.3 ಶೇಕಡಕ್ಕಿಂತ ಇದು ಕಡಿಮೆ ಪ್ರಮಾಣವಾಗಿದೆ ಎಂದು ಪ್ರಕಟಿತವಾಗಿರುವ ವರದಿಗಳು ತಿಳಿಸಿವೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap