ಮುದ್ರಣ ಮಾಧ್ಯಮಕ್ಕೆ ಉತ್ತೇಜನ ಪ್ಯಾಕೇಜ್ ನೀಡಲು ಸರ್ಕಾರಕ್ಕೆ INS ಒತ್ತಾಯ

ನವದೆಹಲಿ:

     ಕೊರೋನಾ ಸೋಂಕು ತಡೆಗಾಗಿ ದೇಶಾದ್ಯಂತ ಲಾಕ್ ಡೌನ್ ಹೇರಿಕೆಯಿಂದಾಗಿ ತೀವ್ರ ಹಿಂಜರಿತಕ್ಕೊಳಗಾಗಿರುವ ಮುದ್ರಣ ಮಾಧ್ಯಮಕ್ಕೆ ಉತ್ತೇಜನ ನೀಡಲು ಸರ್ಕಾರ ಮುಂದಾಗ ಬೇಕು ಮತ್ತು ಇದಕ್ಕಾಗಿ  ಪ್ಯಾಕೇಜ್ ಘೋಷಣೆಯಾಗಬೇಕು ಎಂದು ಐ ಎನ್ ಎಸ್ ಸರ್ಕಾರವನ್ನು ಒತ್ತಾಯಿಸಿದೆ 

     ಈ ವಿಷಯದ ಕುರಿತಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿರುವ ಸೊಸೈಟಿ, ಮುದ್ರಣ ಮಾಧ್ಯಮದ ಮೇಲೆ ಇರುವ ಶೇಕಡಾ 6ರಷ್ಟು ಸುಂಕ ತೆರಿಗೆ, ಮುದ್ರಣ ಸಂಸ್ಥೆಗಳ ಮೇಲಿನ ಎರಡು ವರ್ಷಗಳ ರಜಾ ತೆರಿಗೆ, ಬ್ಯೂರೊ ಆಫ್ ಔಟ್ ರೀಚ್ ಅಂಡ್ ಕಮ್ಯುನಿಕೇಷನ್ ನ ಜಾಹಿರಾತು ದರವನ್ನು ಶೇಕಡಾ 50ರಷ್ಟು ಹೆಚ್ಚಿಸುವುದು ಮತ್ತು ಮುದ್ರಣ ಮಾಧ್ಯಮಗಳ ಬಜೆಟ್ ವೆಚ್ಚವನ್ನು ಶೇಕಡಾ 100ರಷ್ಟು ಹೆಚ್ಚಿಸುವಂತೆ ಕೋರಿದೆ.

      ಬಿಒಸಿ ಮತ್ತು ಇತರ ರಾಜ್ಯ ಸರ್ಕಾರಗಳಿಂದ ಜಾಹಿರಾತುಗಳಿಂದ ಬರಬೇಕಾಗಿರುವ ಹಣವನ್ನು ಕೇಂದ್ರ ಸರ್ಕಾರ ಶೀಘ್ರವೇ ಬಿಡುಗಡೆಗೊಳಿಸುವಂತೆ ಕೋರಿದೆ. ಮುದ್ರಣ ಮಾಧ್ಯಮಕ್ಕೆ ತೀವ್ರ ಹೊಡೆತ ಬಿದ್ದಿದ್ದು  ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ನೆರವಿಗೆ ಬರಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link