ನೌಕಾಪಡೆಗೆ ಸೇರ್ಪಡೆಯಾದ “INS ನೀಲಗಿರಿ”.!

ಮುಂಬೈ:

   ಸಂಪೂರ್ಣ ಸ್ವದೇಶಿ ನಿರ್ಮಿತ ಸ್ಕಾರ್ಪಿನ್ ಕ್ಲಾಸ್ ಐಎಎನ್ಎಸ್ ಖಂಡೇರಿ ನೌಕಾಪಡೆಗೆ ಸೇರ್ಪಡೆಗೊಂಡ ಬೆನ್ನಲ್ಲೇ ಮತ್ತೊಂದು ಫ್ರಿಗೆಟ್ಸ್ ವರ್ಗಕ್ಕೆ ಸೇರಿದ ಯುದ್ಧ ನೌಕೆ ಐಎನ್ಎಸ್ ನೀಲಗಿರಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದೆ.

   ಮುಂಬೈನ ಮಡಗಾಂವ್ ಡಾಕ್ ಯಾರ್ಡ್ ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಐಎನ್ಎಸ್ ನೀಲಗಿರಿಯನ್ನು ಅಧಿಕೃತವಾಗಿ ಸೇನೆಗೆ ಸೇರ್ಪಡೆಗೊಳಿಸಿದರು.

     ಬ್ರಿಟನ್‌ನ ‘ಲಿಯಾಂಡರ್’ ಸರಣಿಯ ಯುದ್ಧನೌಕೆಗಳ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಎರವಲು ಪಡೆದು, ಭಾರತದಲ್ಲೇ ನಿರ್ಮಿಸಿದ ಮೊದಲ ಯುದ್ಧನೌಕೆ ಇದಾಗಿದ್ದು, ಈ ಹಿಂದೆ ಈ ಸರಣಿಯಲ್ಲಿ ಒಟ್ಟು ಆರು ಯುದ್ಧನೌಕೆಗಳನ್ನು ನಿರ್ಮಿಸಲಾಗಿತ್ತು. ಅವೆಲ್ಲವೂ ಈಗ ಸೇವೆಯಿಂದ ನಿವೃತ್ತವಾಗಿವೆ. ಅವೇ ಹೆಸರಿನಲ್ಲಿ ಈಗ ಹೊಸದಾಗಿ ಏಳು ಯುದ್ಧನೌಕೆಗಳನ್ನು ಭಾರತದಲ್ಲಿಯೇ ನಿರ್ಮಿಸಲಾಗು ತ್ತಿದ್ದು, ಅದರಲ್ಲಿ ಐಎನ್‌ಎಸ್‌ ನೀಲಗಿರಿ ಮೊದಲನೆಯದ್ದಾಗಿದೆ ಎಂದು ನೌಕಾಪಡೆ ತಿಳಿಸಿದೆ. 

     ಇನ್ನು ಐಎನ್ಎಸ್ ನೀಲಗಿರಿ ಯುದ್ಧ ನೌಕೆಯು 4 ಎಂಜಿನ್‌ಗಳನ್ನು ಹೊಂದಿದ್ದು, 28 ನಾಟಿಕಲ್ ಮೈಲಿ ಗರಿಷ್ಠ ವೇಗದಲ್ಲಿ ಸಾಗಬಲ್ಲ ಸಾಮರ್ಥ್ಯ ಹೊಂದಿದೆ. ಈ ನೌಕೆಯು ಬೃಹತ್ ಇಂಧನ ಟ್ಯಾಂಕ್ ಹೊಂದಿದ್ದು ಅದನ್ನು ಒಮ್ಮೆ ಭರ್ತಿ ಮಾಡಿದರೆ 5,500 ನಾಟಿಕಲ್ ಮೈಲಿ ವರೆಗೂ ಚಲಿಸಬಹುದು. ಇನ್ನು ಈ ಯುದ್ಧ ನೌಕೆಗೆ ಬರಾಕ್ ಕ್ಷಿಪಣಿ ಉಡಾವಣಾ ವ್ಯವಸ್ಥೆ ಮತ್ತು ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ಷಿಪಣಿ ಉಡಾವಣಾ ವ್ಯವಸ್ಥೆಯೂ ಸಹ ಇದೆ ಎಂದು ತಜ್ಞರು ತಿಳಿಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap