ನವದೆಹಲಿ
ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ಉದ್ಯಮಿ/ ಕಂಪನಿಗಳನ್ನು ದಿವಾಳಿತನದಿಂದ ರಕ್ಷಿಸುವ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಇಂದು ಅಂಗೀಕರಿಸಲಾಯಿತು. ಇನ್‍ಸಾಲ್ವೆನ್ಸಿ ಅಂಡ್ ಬ್ಯಾಂಕ್‍ಕ್ರಪ್ಟ್ಸಿ ಕೋಡ್ (ಸೆಕೆಂಡ್ ಅಮೆಂಡ್‍ಮೆಂಟ್) ಬಿಲ್-2020 ವಿಧೇಯಕಕ್ಕೆ ಸಂಸತ್ತಿನ ಮೇಲ್ಮನೆ ಇಂದು ಅನುಮೋದನೆ ನೀಡಿತು.
ಸಂಸತ್ತಿನ ಮುಂಗಾರು ಅಧಿವೇಶನದ ಆರನೇ ದಿನದ ಕಲಾಪದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಮಸೂದೆಯಲ್ಲಿ ಮಂಡಿಸಿದರು. ವಿರೋಧಪಕ್ಷಗಳ ಭಿನ್ನಾಭಿಪ್ರಾಯಗಳ ನಡುವೆ ಈ ವಿದೇಯಕ್ಕೆ ಅಂಗೀಕಾರ ಲಭಿಸಿತು.
ಕೊರೊನಾ ಹಾವಳಿ ನಿಯಂತ್ರಣಕ್ಕಾಗಿ ದೇಶಾದ್ಯಂತ ಮಾರ್ಚ್ 25ರಿಂದ ಜಾರಿಯಲ್ಲಿದ್ದ ಲಾಕ್‍ಡೌನ್ ಸಂದರ್ಭದಲ್ಲಿ ಬ್ಯಾಂಕ್‍ಗಳಿಗೆ ಸಾಲದ ಹಣ ಪಾವತಿಸಲು ವಿಫಲವಾಗಿರುವ ಕಂಪನಿಗಳನ್ನು ದಿವಾಳಿತನದಿಂದ ರಕ್ಷಿಸಲು ಮತ್ತು ಆರು ತಿಂಗಳ ಕಾಲ ಅವಧಿಯನ್ನು ವಿಸ್ತರಿಸುವ ಉದ್ದೇಶವನ್ನು ಈ ವಿಧೇಯಕ ಒಳಗೊಂಡಿದೆ.ಈ ಮಸೂದೆಯು ಕಂಪನಿಗಳಿಗೆ ರಕ್ಷಣೆ ನೀಡುವ ಉದ್ದೇಶ ಹೊಂದಿದೆ. ಅವುಗಳನ್ನು ಸಮಾಪನೆ ಮಾಡುವ ಬದಲು ಆರು ತಿಂಗಳ ಕಾಲ ಅವಧಿ ವಿಸ್ತರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ