ನವದೆಹಲಿ:
ಭಾರತದಲ್ಲಿ ಐಸಿಸ್ ಗೆ ಹಾಗೂ ಭಾರತ ವಿರೋಧಿ ಭಯೋತ್ಪಾದಕ ಚಟುವಟಿಕೆಗಳಿಗೆ ಟರ್ಕಿ ಆರ್ಥಿಕ ನೆರವು ಮತ್ತು ಬೆಂಬಲ ನೀಡುತ್ತಿರುವುದಾಗಿ ಭಾರತದ ಗುಪ್ತಚರ ತನಿಖಾ ಸಂಸ್ಥೆ ಕಳವಳ ವ್ಯಕ್ತಪಡಿಸಿರುವುದಾಗಿ ವರದಿಯೊಂದು ತಿಳಿಸಿದೆ.ಭಾರತೀಯ ಭದ್ರತಾ ಏಜೆನ್ಸಿ ಕಲೆಹಾಕಿರುವ ಮಾಹಿತಿ ಪ್ರಕಾರ, ಟರ್ಕಿ ಮೂಲದ ಹ್ಯಾಂಡ್ಲರ್ಸ್ ಗಳು ಉಗ್ರರಿಗೆ ಬೆಂಬಲ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಭಾರತದ ಉಗ್ರರು ಸಿರಿಯಾ ತೆರಳಲು ಅವಕಾಶ ಮಾಡಿಕೊಟ್ಟಿದ್ದು, ಅಲ್ಲಿ ಐಸಿಸ್ ಜತೆ ಸೇರಿ ಜಾಗತಿಕ ಉಗ್ರರ ಜಾಲದ ಜತೆ ಸೇರಿ ದುಷ್ಕೃತ್ಯ ಎಸಗಲು ಟರ್ಕಿ ಅವಕಾಶ ಮಾಡಿಕೊಟ್ಟಿರುವುದಾಗಿ ವರದಿ ಹೇಳಿದೆ.
ಇತ್ತೀಚೆಗೆ ಬಂಧಿಸಲ್ಪಟ್ಟಿದ್ದ ಐಸಿಸ್ ಉಗ್ರರು ವಿಚಾರಣೆ ವೇಳೆ ಈ ಸತ್ಯವನ್ನು ಹೊರಹಾಕಿದ್ದು, ಟರ್ಕಿ ಮೂಲಕ ಸಿರಿಯಾವನ್ನು ತಲುಪಿದ್ದು, ಅದೇ ಮಾರ್ಗವಾಗಿ ವಾಪಸ್ ಬಂದಿರುವ ಬಗ್ಗೆಯೂ ತಪ್ಪೊಪ್ಪಿಕೊಂಡಿದ್ದಾರೆ. ಟರ್ಕಿಯಲ್ಲಿರುವ ಹ್ಯಾಂಡ್ಲರ್ ಗಳಿಂದಾಗಿ ಐಸಿಸ್ ಒಳಪ್ರವೇಶಿಸಲು ಅನುಕೂಲ ಕಲ್ಪಿಸಿಕೊಟ್ಟಿರುವುದಾಗಿ ವಿವರಿಸಿದ್ದಾರೆ.
ಭಾರತದಲ್ಲಿರುವ ಐಸಿಸ್ ಸಂಘಟನೆಗೆ ಟರ್ಕಿ ಆರ್ಥಿಕ ನೆರವು ನೀಡಲು ಪ್ರಯತ್ನಿಸಿತ್ತು. ಇದರ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳೊಂದಿಗೆ ನಂಟು ಹಾಗೂ ಲಾಭ ರಹಿತ ಸಂಘಟನೆಗಳ ಜತೆ ಸಖ್ಯ ಹೊಂದಿರುವ ವಿಚಾರ ಭಾರತಕ್ಕೆ ದೊಡ್ಡ ಆಘಾತಕಾರಿಯಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಭಾರತೀಯ ಭದ್ರತಾ ಏಜೆನ್ಸಿ ಹಲವು ಗುಪ್ತಚರ ಸಂಸ್ಥೆಗಳ ಜತೆ ಕಾರ್ಯನಿರ್ವಹಿಸುತ್ತಿರುವುದಾಗಿ ವರದಿ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ