ನವದೆಹಲಿ :
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಹಂಗಾಮಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಐಪಿಎಲ್ ಕಾರ್ಯಾಚರಣಾ ಧಿಕಾರಿಯಾಗಿರುವ ಹೇಮಂಗ್ ಅಮಿನ್ ಅವರನ್ನು ನೇಮಕ ಮಾಡಿದೆ. ಈ ಬಗ್ಗೆ ಎಎನ್‌ಐ ಸುದ್ಧಿ ಸಂಸ್ಥೆಗೆ ಮಾಹಿತಿ ನೀಡಿರುವ ಬಿಸಿಸಿಐ ಮೂಲಗಳು ಹಂಗಾಮಿ ಸಿಇಒ ಆಗಿ ಹೇಮಂಗ್ ಅಮಿನ್ ಅವರನ್ನು ನೀಮಿಸಿರುವುದನ್ನು ಖಚಿತ ಪಡಿಸಿದೆ.
ಕಳೆದ ಕೆಲ ತಿಂಗಳ ಹಿಂದೆಯೇ ಸಿಇಒ ಆಗಿದ್ದ ರಾಹುಲ್ ಜೋಹ್ರಿ ತಮ್ಮ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿದ್ದರೂ ಅದನ್ನು ಬಿಸಿಸಿಐ ಸ್ವೀಕರಿಸಿರಲಿಲ್ಲ. ಕಳೆದ ವಾರ ಜೋಹ್ರಿ ರಾಜಿನಾಮೆಯನ್ನು ಬಿಸಿಸಿಐ ಸ್ವೀಕಾರ ಮಾಡಿದೆ. “ಬಿಸಿಸಿಐ ಇಂದು ರಾಹುಲ್ ಜೋಹ್ರಿ ಅವರ ರಾಜಿನಾಮೆಯನ್ನು ಅಂಗೀಕರಿಸಿದೆ” ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.
ಬಿಸಿಸಿಐ ಅಧ್ಯಕ್ಷರಾಗಿ ಶಶಾಂಕ್ ಮನೋಹರ್ ಅಧಿಕಾರದಲ್ಲಿದ್ದಾಗ 2016ರಲ್ಲಿ ಬಿಸಿಸಿಐನ ಸಿಇಒ ಆಗಿ ರಾಹುಲ್ ಜೋಹ್ರಿ ಅವರನ್ನು ನೇಮಕ ಮಾಡಲಾಗಿತ್ತು. ಮೂರುವರೆ ವರ್ಷಗಳ ತಮ್ಮ ಅಧಿಕಾರವನ್ನು ಪೂರೈಸಿ ರಾಹುಲ್ ತಮ್ಮ ಸ್ಥಾನಕ್ಕೆ ರಾಜಿನಾಮೆಯನ್ನು ಸಲ್ಲಿಸಿದ್ದರು.
ಸದ್ಯ ಭಾರತದಲ್ಲಿ ಕೊರೊನಾ ವೈರಸ್‌ನ ಹಾವಳಿಯಿಂದಾಗಿ ಕ್ರಿಕೆಟ್ ಚಟುವಟಿಗೆ ಆರಂಭವಾಗಿಲ್ಲ. ಮಾರ್ಚ್ ಬಳಿಕ ಭಾರತೀಯ ಕ್ರಿಕೆಟ್ ತಂಡ ಯಾವುದೇ ಪಂದ್ಯಗಳಲ್ಲಿ ಪಾಲ್ಗೊಂಡಿಲ್ಲ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಈಗಾಗಲೇ ಪುನಾರಂಭಗೊಂಡಿದೆ.ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಳೆದ ವಾರ ಚಾಲನೆ ದೊರೆತಿದೆ. ಕೊರೊನಾ ವೈರಸ್ ಬಳಿಕ ನಡೆದ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಅದ್ಭುತ ಪ್ರದರ್ಶನವನ್ನು ನೀಡಿ ತವರಿನಲ್ಲೇ ಇಂಗ್ಲೆಂಡ್‌ಗೆ ಸೋಲಿನ ರುಚಿ ತೋರಿಸಿತು. ಈ ಮೂಲಕ ವಿಂಡೀಸ್ ತಂಡ ಭರ್ಜರಿ ಶುಭಾರಂಭ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
