ನವದೆಹಲಿ:
COVID-19 ಸಾಂಕ್ರಾಮಿಕ ರೋಗಗಳ ನಡುವೆ, ನವೆಂಬರ್ 30ರ ವರೆಗೆ ಭಾರತದಿಂದ ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಯನ್ನು ಮತ್ತಷ್ಟು ಸ್ಥಗಿತಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಬುಧವಾರ ತಿಳಿಸಿದೆ. ‘ಭಾರತದಿಂದ ವಿದೇಶಕ್ಕೆ ಹೋಗುವ ಹೋಗುವ/ಬರುವ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗಳ ಮೇಲಿನ ಅಮಾನತು ನವೆಂಬರ್ 30ರ ವರೆಗೆ ವಿಸ್ತರಣೆ’ ಎಂದು ವಿಮಾನಯಾನ ನಿಯಂತ್ರಕ ರು ತಿಳಿಸಿದ್ದಾರೆ.
ಆದಾಗ್ಯೂ, ಅಂತಾರಾಷ್ಟ್ರೀಯ ಸರಕು ಸಾಗಣೆ ವಿಮಾನಗಳು ಮತ್ತು ಸರ್ಕಾರಅನುಮೋದಿಸಿದ ಪ್ರಯಾಣಿಕರ ವಿಮಾನಗಳು ನಿರಂತರವಾಗಿ ಕಾರ್ಯನಿರ್ವಹಿಸಲಿವೆ. ನಾಗರಿಕ ವಿಮಾನಯಾನ ನಿಯಂತ್ರಕರು, ‘ಅಂತರರಾಷ್ಟ್ರೀಯ ನಿಗದಿತ ವಿಮಾನಗಳನ್ನು ಕೇಸ್ ಟು ಕೇಸ್ ಆಧಾರದ ಮೇಲೆ ಆಯ್ದ ಮಾರ್ಗಗಳಲ್ಲಿ ಹಾರಾಟ ನಡೆಸಲು ಅವಕಾಶ ನೀಡಬಹುದು ಅಂತ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
