ವಿ ಕೆ ಶಶಿಕಲಾ ಅವರಿಗೆ ಐಟಿ ಶಾಕ್..!

ಚೆನ್ನೈ

    ಎಐಎಡಿಎಂಕೆಯ ಪದಚ್ಯುತ ನಾಯಕಿ ವಿ.ಕೆ. ಶಶಿಕಲಾ ಅವರಿಗೆ ಸೇರಿರುವ ಸಾವಿರಾರು ಕೋಟಿ  ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲು  ಆದಾಯ ತೆರಿಗೆ ಇಲಾಖೆ ಮುಂದಾಗಿದೆ

     ಚೆನ್ನೈ, ಪುದುಚೆರಿ ಮತ್ತು ಕೊಯಮತ್ತೂರಿನಲ್ಲಿ ಅವರು 2006ರ ನ. 8 ರಂದು ನೋಟು ಅಮಾನ್ಯೀಕರಣದ ನಂತರ, ಖರೀದಿಸಿದ ಒಂಭತ್ತು ಆಸ್ತಿಗಳಿದ್ದು ಅವುಗಳು ಸೇರಿ 1600 ಕೋಟಿ ರೂ ಮೌಲ್ಯದ ಆಸ್ತಿಯನ್ನು ಬೇನಾಮಿ ವ್ಯವಹಾರಗಳ (ನಿಷೇಧ) ಕಾಯ್ದೆಯಡಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲು ಆದಾಯ ತೆರಿಗೆ ಇಲಾಖೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

     ಚೆನ್ನೈನ ಆದಾಯ ತೆರಿಗೆ ಇಲಾಖೆಯ ಬೇನಾಮಿ ನಿಷೇಧ ಘಟಕದ ಅಧಿಕಾರಿ ಅವರು ನೀಡಿದ ಮುಟ್ಟುಗೋಲು ಆದೇಶದ ಮೇರೆಗೆ, ಮುಟ್ಟುಗೋಲು ಹಾಕಿಕೊಂಡು ರಿಜಿಸ್ಟ್ರಾರ್ ಮತ್ತು ಸಬ್ ರಿಜಿಸ್ಟ್ರಾರ್ ಕಂಪನಿಗಳಿಗೆ ಕಳಿಸಲಾಗಿದೆ. ಈ ಜಪ್ತಿ ಪ್ರಕ್ರಿಯೆ ೯೦ ದಿನಗಳ ಕಾಲ ಚಾಲ್ತಿಯಲ್ಲಿರುತ್ತದೆ.

    ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ದಿ. ಜಯಲಲಿತಾ ಅವರ ವಿರುದ್ಧದ ಆದಾಯ ಮೀರಿ ಗಳಿಸಿದ ಆಸ್ತಿ ಪ್ರಕರಣದಲ್ಲಿ ಬಂಧಿಸಲಾಗಿರುವ ಶಶಿಕಲಾ ೨೦೧೭ ರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿದ್ದಾರೆ.
ಜೈಲಿನ ಅಧಿಕಾರಿಗಳಿಗೂ ಈ ಬಗ್ಗೆ ಪತ್ರ ಬರೆಯಲಾಗಿದೆ. ನೋಟು ಅಮಾನ್ಯೀಕರಣದ ನಂತರ, ಶಶಿಕಲಾ ಮಾನ್ಯತೆ ಕಳೆದುಕೊಂಡ 1500 ಕೋಟಿ ರೂ. ಮೌಲ್ಯದ 9 ಆಸ್ತಿಗಳನ್ನು ವಿವಿಧ ಕಾಲ್ಪನಿಕ ಹೆಸರುಗಳಲ್ಲಿ ಖರೀದಿಸಿದ್ದು, ೨೦೧೭ರ ನವೆಂಬರ್‌ನಲ್ಲಿ ನಡೆದ ಬೃಹತ್ ದಾಳಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಪತ್ತೆಹಚ್ಚಿದ್ದರು.

     ಶಶಿಕಲಾಗೆ ಸೇರಿದ ಬೇನಾಮಿ ಆಸ್ತಿಗಳ ಪತ್ತೆಗಾಗಿ 2 ವರ್ಷಗಳ ಹಿಂದೆ ಆದಾಯ ತೆರಿಗೆ ಅಧಿಕಾರಿಗಳು ಚೆನ್ನೈ, ಪುದುಚೆರಿ ಮತ್ತು ಕೊಯಮತ್ತೂರಿನ 37 ಸ್ಥಳಗಳ ಮೇಲೆ ದಾಳಿ ನಡೆಸಿದ್ದರು.ಇತರ 150 ಸ್ಥಳಗಳಲ್ಲಿ ಅಕ್ರಮ ದಾಖಲೆಗಳು ಪತ್ತೆಯಾಗಿದ್ದವು . ಖರೀದಿಸಿದ ಆಸ್ತಿಗಳು, ಮನೆಯಲ್ಲಿ ಕೆಲಸ ಮಾಡುವ ಆಳುಗಳು, ಸಹಾಯಕರು ಮತ್ತು ಕಾರು ಚಾಲಕರ ಹೆಸರಿನಲ್ಲಿದ್ದವು

    ಜಯಲಲಿತಾ ಅವರ ಪೊಯಿಸ್ ಗಾರ್ಡನ್ ಮನೆ ಸೇರಿದಂತೆ, ಹಲವಾರು ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆಯ ೧,೮೦೦ ಅಧಿಕಾರಿಗಳು ದಾಳಿ ನಡೆಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap