ಅಹ್ಮದ್ ಪಟೇಲ್ ಗೆ ಐಟಿ ಸಮನ್ಸ್..!

ನವದೆಹಲಿ

    ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಕಾಂಗ್ರೆಸ್ ಪಕ್ಷದ ಮೇಲೆ ಐಟಿ ದಾಳಿ . ಸುಮಾರು 550 ಕೋಟಿ ರೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಖಜಾಂಚಿ ಅಹ್ಮದ್ ಪಟೇಲ್ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ.

    ಏಪ್ರಿಲ್ 2, 2019ರಲ್ಲಿ ಮಧ್ಯಪ್ರದೇಶ ಸೇರಿದಂತೆ 52 ಕಡೆಗಳಲ್ಲಿ ಅಕ್ಟೋಬರ್ 2019ರಲ್ಲಿ ಹಾಗೂ ಫೆಬ್ರವರಿ 2020ರಲ್ಲಿ ಹೈದರಾಬಾದ್, ವಿಜಯವಾಡ ಮುಂತಾದೆಡೆಗಳಲ್ಲಿ ಐಟಿ ದಾಳಿ ನಡೆಸಲಾಗಿತ್ತು.

    ದೇಣಿಗೆ ಮೊತ್ತದಲ್ಲಿ 550 ಕೋಟಿ ರೂಗಳಿಗೂ ಅಧಿಕ ಮೊತ್ತವನ್ನು ಘೋಷಿಸಿಕೊಂಡಿರಲಿಲ್ಲ. ಈ ಕುರಿತು ದಾಖಲೆ ಸಮೇತ ವಿವರಣೆ ನೀಡುವಂತೆ ಕೋರಿ ಪಕ್ಷದ ಖಜಾಂಚಿ ಅಹ್ಮದ್ ಪಟೇಲ್‌ಗೆ ಸಮನ್ಸ್ ನೀಡಲಾಗಿದೆ.ಅಹ್ಮದ್ ಪಟೇಲ್ ಸೇರಿದಂತೆ ಆರು ಕಾಂಗ್ರೆಸ್ ನಾಯಕರು, ಮೇಘ ಇಂಜಿನಿಯರ್ ಸಂಸ್ಥೆ ವಿರುದ್ಧ ದೂರು ದಾಖಲಾಗಿದೆ. ಐಟಿ ಸಮನ್ಸ್ ಬಂದಿರುವ ಸುದ್ದಿಯನ್ನು ಪಟೇಲ್ ಅವರು ಖಚಿತಪಡಿಸಿದ್ದು, ” ನನಗೆ ಹುಷಾರಿಲ್ಲ, ಸಂಸತ್ತಿನ ವ್ಯವಹಾರಗಳಿವೆ, ಸಮನ್ಸ್ ನನ್ನ ಸಂಸತ್ತಿನ ಇಮೇಲ್ ಐಡಿಗೆ ಬಂದಿರುವುದರಿಂದ ತಕ್ಷಣದ ಪ್ರತಿಕ್ರಿಯೆ ನೀಡಲಾಗಿಲ್ಲ. ಶೀಘ್ರದಲ್ಲೇ ಇದಕ್ಕೆ ಉತ್ತರಿಸುತ್ತೇನೆ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

 

Recent Articles

spot_img

Related Stories

Share via
Copy link
Powered by Social Snap