ಕಲ್ಕಿ ಭಗವಾನ್ ಮೇಲೆ ಐಟಿ ದಾಳಿ..!

ತಿರುಪತಿ:

      ಆಂಧ್ರಪ್ರದೇಶ ಜನರ ಆರಾಧ್ಯ ದೈವ ಕಲ್ಕಿ ಭಗವಾನ್ ಅವರ ಆಶ್ರಮ, ಶಿಕ್ಷಣ ಸಂಸ್ಥೆ ಹಾಗೂ ಇನ್ನಿತರೆ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ  ಅಧಿಕಾರಿಗಳು ಬುಧವಾರ  ದಾಳಿ ನಡೆಸಿದ್ದಾರೆ. ಕಲ್ಕಿ ಅವರ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿರುವ ಶಾಖೆಗಳಲ್ಲಿ ವ್ಯಾಪಕ ಶೋಧ ಮುಂದುವರಿಸಿದೆ ಎಂದು ತಿಳಿದು ಬಂದಿದೆ.

     ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿರುವ ಕಲ್ಕಿ ಭಗವಾನ್ ಆಶ್ರಮ ಪ್ರಸ್ತುತ ಪೊಲೀಸರ ಬಿಗಿ ಬಂದೋಬಸ್ತ್ ನಲ್ಲಿದೆ. ದಾಳಿ ಸಂದರ್ಭದಲ್ಲಿ ಕಲ್ಕಿ ಭಗವಾನ್ ಹಾಗೂ ಅವರ ಪತ್ನಿ ಪದ್ಮಾವತಿ ಲಭ್ಯವಿರಲಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

     ಚೆನ್ನೈನ ನುಂಗಂಬಾಕಂ ಕಚೇರಿಯಲ್ಲಿ ಕಲ್ಕಿ ಭಗವಾನ್ ಪುತ್ರ ಕೃಷ್ಣ ಹಾಗೂ ಸೊಸೆ ಪ್ರೀತಿಯನ್ನು ತೆರಿಗೆ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ.

     ಚಿತ್ತೂರು ಜಿಲ್ಲೆಯ ವಿವಿಧ ಆಶ್ರಮಗಳ ವ್ಯವಸ್ಥಾಪಕ ಲೋಕೇಶ್ ದಾಸಾಜಿ ಮತ್ತು ಆಶ್ರಮದ ಕೆಲ ಸಿಬ್ಬಂದಿಗಳನ್ನು  ರಹಸ್ಯವಾಗಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ . ಆಶ್ರಮ ಸುತ್ತಮುತ್ತ ನೂರಾರು ಕೋಟಿ ಮೌಲ್ಯದ ಅಕ್ರಮ ಆಸ್ತಿಗಗಳು, ಬೆನಾಮಿ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿ ಗುರುತಿಸಿದ್ದಾರೆ. ಕಲ್ಕಿ ಆಶ್ರಮ ಪ್ರವೇಶವನ್ನು ಮಾಧ್ಯಮಗಳಿಗೆ ನಿರಾಕರಿಸಲಾಗಿದೆ.

    ಈ ಹಿಂದೆ ಕಲ್ಕಿ ಭಗವಾನ್ ಆಶ್ರಮದಲ್ಲಿ  ಹಲವು ಅವ್ಯವಹಾರ ಆರೋಪ ಕೇಳಿಬಂದಿದ್ದವು. ಭಕ್ತರಿಗೆ ಲೈಂಗಿಕ ಕಿರುಕುಳ, ಬೆದರಿಕೆ ಒಡ್ಡಿದ್ದ ಆರೋಪಗಳು ಕೇಳಿಬಂದಿದ್ದವು. 

ಕಲ್ಕಿ ಭಗವಾನ್ ಹಿನ್ನೆಲೆ:     

    ಭಾರತೀಯ ಜೀವ ವಿಮಾ ನಿಗಮದಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಜೀವನ ನಡೆಸುತ್ತಿದ್ದ ವಿಜಯ್ ಕುಮಾರ್ ನಾಯ್ಡು ಅಲಿಯಾಸ್ ಕಲ್ಕಿ ಭಗವಾನ್ ನಂತರ ಉದ್ಯೋಗ ತ್ಯಜಿಸಿ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಅದು ನಷ್ಟ ಅನುಭವಿಸಿದ ಕಾರಣ ಕೆಲಕಾಲ ಕಣ್ಮರೆಯಾಗಿದ್ದರು. ನಂತರ ವಿಜಯ್ ಕುಮಾರ್ 1989 ರಲ್ಲಿ ಚಿತ್ತೂರು ಜಿಲ್ಲೆಯಲ್ಲಿ ಕಾಣಿಸಿಕೊಂಡು ತಾವು ಭಗವಾನ್ ವಿಷ್ಣುವಿನ 11ನೇ ಅವತಾರ ಎಂದು ಹೇಳಿಕೊಂಡು ಕಲ್ಕಿ ಭಗವಾನ್ ಎಂದು ಹೆಸರಾದರು.

  ಕಲ್ಕಿ ಭಗವಾನ್ ಸಾಮಾನ್ಯರ ಭೇಟಿಯಾಗ ಬೇಕೆಂದದರೆ 5೦೦೦ ರೂ. ಇನ್ನೂ ಪ್ರತ್ಯೇಕ ದರ್ಶನಕ್ಕೆ 25 ಸಾವಿರ ರೂಪಾಯಿ ಪಡೆಯುತ್ತಿದ್ದರು ಎನ್ನಲಾಗಿದೆ. 2008ರಲ್ಲಿ ಆಶ್ರಮದಲ್ಲಿ ಉಂಟಾದ ಕಾಲ್ತುಳಿತದಿಂದ ಐವರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದ ಘಟನೆ ನಡೆದಿತ್ತು ಮತ್ತು ಕಲ್ಕಿ ಭಗವಾನ್ ವಿರುದ್ಧ ಹಲವು ಪೊಲೀಸ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ . 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap