ಲಡಾಖ್:
71ನೇ ಗಣರಾಜ್ಯೋತ್ಸವ ಆಚರಣೆಯನ್ನು ಲಡಾಖ್ ನ ಇಂಡೋ ಟಿಬೆಟ್ ಬಾರ್ಡರ್ ಪೊಲೀಸರು ತ್ರಿವರ್ಣ ಧ್ವಜವನ್ನು ಹಾರಿಸು ಮೂಲಕ ಗಣರಾಜ್ಯೋತ್ಸವ ಆಚರಿಸಿದ್ದಾರೆ.
ಲಡಾಖ್ ನ ಸುಮಾರು 17 ಸಾವಿರ ಅಡಿ ಎತ್ತರದ ಯುದ್ಧ ಭೂಮಿಯಲ್ಲಿ ಐಟಿಬಿಪಿ ಯೋಧರು ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ರಕ್ತವನ್ನೇ ಹೆಪ್ಪುಗಟ್ಟಿಸುವಷ್ಟು ಭೀಕರ ಚಳಿಯಲ್ಲಿ ಯುದ್ಧಭೂಮಿಯನ್ನು ಸೈನಿಕರು ಕಾಯುತ್ತಿದ್ದು, ಈ ಭಯಂಕರ ಚಳಿಯನ್ನೂ ಲೆಕ್ಕಿಸದೇ ತ್ರಿವರ್ಣ ಧ್ವಜವನ್ನು ಹಾರಿಸಿ ಗಣರಾಜ್ಯೋತ್ಸವದ ಸಂಭ್ರಮಿಸಿದ್ದಾರೆ.